* ಆಕಾಶವಾಣಿಯಲ್ಲಿ ಪ್ರಸಾರವಾಗುವ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮದಿಂದ 2014 ಅಕ್ಟೋಬರ್ 3ರಿಂದ ಇಂದುವರೆಗೆ ವಿವಿಧ ಪ್ಲಾಟ್ಫಾರ್ಮ್ಗಳಿಂದ ₹34.13 ಕೋಟಿ ಆದಾಯ ಲಭಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್ ತಿಳಿಸಿದ್ದಾರೆ.* ಈ ಆದಾಯದಲ್ಲಿ ಹೆಚ್ಚಿನ ಭಾಗ ಯೂಟ್ಯೂಬ್ ಮತ್ತು ಫೇಸ್ಬುಕ್ನಿಂದ ಬಂದಿದೆ. ಹೆಚ್ಚುವರಿ ವೆಚ್ಚವಿಲ್ಲದೇ, ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕಾರ್ಯಕ್ರಮವನ್ನು ನಿರ್ಮಿಸಲಾಗುತ್ತದೆ.* ‘ಮನ್ ಕಿ ಬಾತ್’ ದೇಶದ ಕೋಟ್ಯಂತರ ಜನರಿಗೆ ತಲುಪುವುದರ ಜೊತೆಗೆ ವಿದೇಶದಲ್ಲಿಯೂ ಕೇಳುಗರನ್ನು ಹೊಂದಿದೆ. * ಇದು ಆಕಾಶವಾಣಿ, ದೂರದರ್ಶನ, ಯೂಟ್ಯೂಬ್, ಫೇಸ್ಬುಕ್, ಎಕ್ಸ್ ಮತ್ತು ನ್ಯೂಸ್ ಆನ್ ಎಐಆರ್ ಆ್ಯಪ್ನಲ್ಲಿ ಲಭ್ಯ.* ಪ್ರತಿ ತಿಂಗಳು ಅರ್ಧ ಗಂಟೆಯ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಮ್ಮ ನೆಚ್ಚಿನ ವಿಷಯಗಳು ಮತ್ತು ಜನರಿಂದ ಬಂದ ಸಲಹೆಗಳ ಕುರಿತು ಮಾತನಾಡುತ್ತಾರೆ.