* ಆಕಾಶದಲ್ಲಿ ಇಂದು (ಜನವರಿ.25) ಅಪರೂಪದ ಖಗೋಳ ವಿಸ್ಮಯ ನಡೆಯಲಿದ್ದು, ಅಪರೂಪದ ಗ್ರಹಗಳ ಸಂಯೋಗ ನಡೆಯಲಿದೆ.* ಸೌರಮಂಡಲದ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಈ ದಿನ ಅಪರೂಪದ ಸ್ಥಿತಿಯಲ್ಲಿ ಸಂಚರಿಸಲಿವೆ.* ಸೂರ್ಯಾಸ್ತದ ನಂತರ ಶುಕ್ರ ಮತ್ತು ಗುರು ಗ್ರಹಗಳು ಸಾಕಷ್ಟು ಪ್ರಕಾಶಮಾನವಾಗಿ ಹೊಳೆಯಲಿವೆ. ಮಂಗಳ ಗ್ರಹವು ಮತ್ತಷ್ಟು ಹೊಳಪನ್ನು ಸುರಿಸಲಿದೆ.* ಸೌರಮಂಡಲದ ಹಲವು ಗ್ರಹಗಳು ಸಾಲಾಗಿ ನಿಂತಂತೆ ಭಾಸವಾಗುವ ಈ ರಚನೆಯು ಬಾಹ್ಯಾಕಾಶ ಪ್ರಿಯರಿಗೆ ಕೌತುಕವಾಗಿದೆ. ಈ ಅಪರೂಪದ ಘಟನೆಯಲ್ಲಿ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಆಕಾಶದ ಒಂದೇ ಭಾಗದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಆದರೆ, ಒಂದೇ ನೇರ ಸಾಲಿನಲ್ಲಿ ಇರುವುದಿಲ್ಲ.* ವಿಜ್ಞಾನದ ಪ್ರಕಾರ, ಗ್ರಹಗಳ ವಿಭಿನ್ನ ಪರಿಭ್ರಮಣ ಅವಧಿಗಳಿಂದಾಗಿ ಇಂತಹ ಸಾಲುಗಳು ಉಂಟಾಗುತ್ತವೆ. * ಈ ರಚನೆಯು ಆಕಾಶದಲ್ಲಿ ಗ್ರಹಗಳು ನರ್ತಿಸುವಂತೆ ಭ್ರಮೆಯನ್ನು ಉಂಟು ಮಾಡುತ್ತದೆ. ಬೇರೆ ಖಗೋಳ ಘಟನೆಗಳಿಗಿಂತ ವಿಭಿನ್ನವಾಗಿ ಗ್ರಹಗಳ ಸಂಯೋಗ ನಡೆಯಲಿದ್ದು, ಇದನ್ನು ಬರಿಗಣ್ಣಲ್ಲೇ ನೋಡಬಹುದು ಎಂದು ತಜ್ಞರು ಹೇಳಿದ್ದಾರೆ.