* ಕೈಮಗ್ಗ ಉದ್ಯಮವನ್ನು ಉತ್ತೇಜಿಸುವ ಮತ್ತು ನೇಕಾರ ಸಮುದಾಯದ ಸಮರ್ಪಣೆ ಮತ್ತು ಪರಿಣತಿಯನ್ನು ಗುರುತಿಸುವ ಪ್ರಮುಖ ಉದ್ದೇಶದೊಂದಿಗೆ ಭಾರತ ಸರ್ಕಾರವು ಅಗಸ್ಟ್ 7 ಅನ್ನು ವಾರ್ಷಿಕ ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸಲಾಗುತ್ತದೆ. * ಗೌರವಾನ್ವಿತ ಪ್ರಧಾನಮಂತ್ರಿಯವರ ದೃಷ್ಟಿಕೋನದಂತೆ ಸರ್ಕಾರ 2015 ರ ಆಗಸ್ಟ್ 7 ರಂದು ಮೊದಲ ಬಾರಿಗೆ ರಾಷ್ಟ್ರೀಯ ಕೈಮಗ್ಗ ದಿನ ಆಚರಣೆಯನ್ನು ಪ್ರಾರಂಭಿಸಿತು. 1905 ರಂದು ಆರಂಭವಾದ ಸ್ವದೇಶಿ ಚಳವಳಿಯ ದಿನದ ಸ್ಮರಣಾರ್ಥ ಮತ್ತು ದೇಶೀಯ ಕೈಗಾರಿಕೆಗಳು, ವಿಶೇಷವಾಗಿ ಕೈಮಗ್ಗ ನೇಕಾರರನ್ನು ಉತ್ತೇಜಿಸಲು ಈ ದಿನವನ್ನು ಆಚರಣೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.* ಈ ವಲಯದ ಕುಶಲಕರ್ಮಿಗಳು, ನೇಕಾರರು ಮತ್ತು ಉತ್ಪಾದಕರು ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಪರಂಪರೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. * ಈ ಸಂದರ್ಭವು ಕುಶಲಕರ್ಮಿಗಳು ಮತ್ತು ನೇಕಾರರ ಸಕ್ರಿಯ ಭಾಗವಹಿಸುವಿಕೆ ಮತ್ತು ಬೆಂಬಲವನ್ನು ಪ್ರೋತ್ಸಾಹಿಸುವ ಮೂಲಕ ಅವರ ಗೋಚರತೆ ಮತ್ತು ಆರ್ಥಿಕ ಯೋಗಕ್ಷೇಮವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. * ರಾಷ್ಟ್ರೀಯ ಕೈಮಗ್ಗ ದಿನದ ಪ್ರಮುಖ ಸರ್ಕಾರಿ ಯೋಜನೆಗಳು : - ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ (NHDP)- ನೂಲು ಸರಬರಾಜು ಯೋಜನೆ- ನೇಕಾರರಿಗೆ ಮುದ್ರಾ ಯೋಜನೆ- (HWCWS) ಕೈಮಗ್ಗ ನೇಕಾರರ ಸಮಗ್ರ ಕಲ್ಯಾಣ ಯೋಜನೆ- (CHCDS) ಸಮಗ್ರ ಕೈಮಗ್ಗ ಕ್ಲಸ್ಟರ್ ಅಭಿವೃದ್ಧಿ ಯೋಜನೆ- (RMSS) ಕಚ್ಚಾ ವಸ್ತುಗಳ ಪೂರೈಕೆ ಯೋಜನೆ