* ಭಾರತದಲ್ಲಿ ಸಣ್ಣ ಹಾಗೂ ಗುಡಿ ಕೈಗಾರಿಕೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದ್ದು, ದೇಶದ ಆರ್ಥಿಕತೆಯ ಬೆನ್ನೆಲುಬಾಗಿವೆ. ಇವುಗಳ ಮಹತ್ವವನ್ನು ಗುರುತಿಸಲು ಪ್ರತಿವರ್ಷ ಆಗಸ್ಟ್ 30 ರಂದು 'ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನ'ವನ್ನು ಆಚರಿಸಲಾಗುತ್ತದೆ.* ಈ ದಿನವನ್ನು ಆಚರಿಸುವ ಪರಂಪರೆ 2000ರಲ್ಲಿ ಆರಂಭವಾಯಿತು. ಆಗಿನ ಕೇಂದ್ರ ಸರ್ಕಾರವು ಆಗಸ್ಟ್ 30ರಂದು ಸಣ್ಣ ಕೈಗಾರಿಕೆಗಳಿಗೆ ಸಮಗ್ರ ನೀತಿ ಪ್ಯಾಕೇಜ್ ಸಿದ್ಧಪಡಿಸಿತು. 2001ರಲ್ಲಿ ಮೊದಲ ಬಾರಿಗೆ ನವದೆಹಲಿಯಲ್ಲಿ SSI ಸಚಿವಾಲಯ ಸಮ್ಮೇಳನ ಆಯೋಜಿಸಿ, ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿತು.* ಈ ದಿನದ ಉದ್ದೇಶ ಸಣ್ಣ ಕೈಗಾರಿಕೆಗಳ ಕೊಡುಗೆಯನ್ನು ಗುರುತಿಸುವುದು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಒದಗಿಸುವುದು, ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವುದು ಮತ್ತು ಈ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವ ವೇದಿಕೆ ಒದಗಿಸುವುದಾಗಿದೆ.* ಸಣ್ಣ ಕೈಗಾರಿಕೆಗಳು ಸ್ಥಳೀಯ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಕಡಿಮೆ ಬಂಡವಾಳದಲ್ಲಿ ಕಾರ್ಯನಿರ್ವಹಿಸುತ್ತವೆ.* ಇವು ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಿ ಜಿಡಿಪಿ ಹಾಗೂ ರಫ್ತುಗಳಿಗೆ ಗಣನೀಯ ಕೊಡುಗೆ ನೀಡುತ್ತವೆ.