* ರಾಷ್ಟ್ರೀಯ ಕ್ರೀಡಾ ದಿನವನ್ನು ಭಾರತದ ಶ್ರೇಷ್ಠ ಹಾಕಿ ಆಟಗಾರರಾಗಿದ್ದ ಮೇಜರ್ ಧ್ಯಾನ್ ಚಂದ್ ರವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಆಗಸ್ಟ್ 29 ರಂದು ಆಚರಿಸಲಾಗುತ್ತದೆ. ಆಗಸ್ಟ್ 29, ಹಾಕಿ ದಂತಕಥೆ ಮೇಜರ್ ಧ್ಯಾನಚಂದ್ ಅವರ ಜನ್ಮ ದಿನ ಕೂಡ ಹೌದು. ಇಂದು ಧ್ಯಾನಚಂದ್ ಅವರ 120ನೇ ಜನ್ಮದಿನವಾಗಿದೆ.* "ಶಾಂತಿಯುತ ಸಮಾಜಗಳನ್ನು ಉತ್ತೇಜಿಸಲು ಕ್ರೀಡೆ" ಎಂಬುದು 2025 ರ ಥೀಮ್ ಆಗಿದೆ.* 2012 ರಲ್ಲಿ ಕ್ರೀಡಾ ಮನೋಭಾವದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ವಿವಿಧ ಕ್ರೀಡೆಗಳ ಸಂದೇಶವನ್ನು ಪ್ರಚಾರ ಮಾಡುವ ಉದ್ದೇಶದಿಂದ ಆಗಸ್ಟ್ 29 ಅನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಬೇಕು ಎಂದು ಘೋಷಿಸಲಾಯಿತು.* ಭಾರತ ಸರ್ಕಾರವು ರಾಷ್ಟ್ರೀಯ ಕ್ರೀಡಾ ದಿನದಂದು ಹಾಕಿ ಆಟಗಾರ ಮತ್ತು ದೇಶದ ಅಥ್ಲೆಟಿಕ್ ಕ್ರೀಡಾಪಟುಗಳನ್ನು ಮೇಜರ್ ಧ್ಯಾನ್ಚಂದ್ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. * ರಾಷ್ಟ್ರಪತಿ ಭವನದಲ್ಲಿ ಪ್ರತಿವರ್ಷ ವಿಶೇಷ ಸಮಾರಂಭವನ್ನು ನಡೆಸಲಾಗುತ್ತದೆ ಮತ್ತು ಭಾರತದ ರಾಷ್ಟ್ರಪತಿಗಳು ಈ ಪ್ರಶಸ್ತಿಗಳನ್ನು ನೀಡುತ್ತಾರೆ.* ಮೇಜರ್ ಧ್ಯಾನ್ ಚಂದ್ ಅವರು 29 ಆಗಸ್ಟ್ 1905 ರಂದು ಅಹಮದಾಬಾದ್ನ ರಜಪೂತ ಕುಟುಂಬದಲ್ಲಿ ಜನಿಸಿದರು. ತಂದೆ ಸಮೇಶ್ವರ್ ಸಿಂಗ್ ಅವರಂತೆಯೇ ಧ್ಯಾನ್ ಚಂದ್ ಅವರು ಭಾರತೀಯ ಸೇನೆಗೆ ಸೇರಿದ್ದರು. ಅಲ್ಲಿ ಅವರು ಹಾಕಿ ಕ್ರೀಡೆ ಪ್ರೀತಿಯಲ್ಲಿ ಸಿಲುಕಿಕೊಂಡಿದ್ದರು.* ಶ್ರೇಷ್ಠ ಭಾರತೀಯ ಹಾಕಿ ಆಟಗಾರನ ಮೂಲ ಹೆಸರು ಧ್ಯಾನ್ ಸಿಂಗ್ ಆದರೆ ಅವರು ಬೆಳದಿಂಗಳ ರಾತ್ರಿಗಳಲ್ಲಿ ಮಾತ್ರ ಹಾಕಿ ಅಭ್ಯಾಸ ಮಾಡುತ್ತಿದ್ದರು. ಆದ್ದರಿಂದ ತಂಡದ ಸಹ ಆಟಗಾರರು ಅವರಿಗೆ "ಧ್ಯಾನ್ ಚಂದ್" ಎಂದು ಮರುನಾಮಕರಣ ಮಾಡಿದ್ದರು.* ಧಾನ್ಯ ಚಂದ್ ಅವರ 22 ವರ್ಷಗಳ ವೃತ್ತಿಜೀವನದಲ್ಲಿ ಅವರು 400 ಗೋಲುಗಳನ್ನು ಗಳಿಸಿದ್ದರು. ಅಲ್ಲದೆ ಭಾರತ ಮೂರು ಒಲಿಂಪಿಕ್ ಪದಕಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2002ರಲ್ಲಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ನವದೆಹಲಿಯ ರಾಷ್ಟ್ರೀಯ ಹಾಕಿ ಕ್ರೀಡಾಂಗಣಕ್ಕೆ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಇಡಲಾಯಿತು.* ಭಾರತೀಯ ಹಾಕಿಗೆ ನೀಡಿದ ಕೊಡುಗೆಗಾಗಿ ಧ್ಯಾನ್ ಚಂದ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. ಹಾಕಿಗೆ ನಿವೃತ್ತಿ ಘೋಷಿಸಿದ ಬಳಿಕ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಮುಖ್ಯ ಕೋಚ್ ಆಗಿದ್ದರು. ಈಗ ಕೇಂದ್ರ ಸರ್ಕಾರ ಅವರ ಹೆಸರಿನಲ್ಲಿ ಪ್ರತಿ ವರ್ಷ ಕ್ರೀಡೆ ಕ್ಷೇತ್ರದಲ್ಲಿ ಸಾಧನೆ ಗೈದ ಆಟಗಾರರಿಗೆ "ಖೇಲ್ ರತ್ನ" ಪ್ರಶಸ್ತಿಯನ್ನು ನೀಡಲಾಗುತ್ತಿದೆ.