* ಪ್ರಧಾನಿ ಮೋದಿ ಆಗಸ್ಟ್ 23 ರಂದು ಉಕ್ರೇನ್ ರಾಜಧಾನಿಗೆ ಭೇಟಿ ನೀಡಲಿದ್ದು, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.* ಉಕ್ರೇನ್‌ನಲ್ಲಿನ ಸಂಘರ್ಷವನ್ನು ಪರಿಹರಿಸಲು ಭಾರತ ಯಾವಾಗಲೂ ರಾಜತಾಂತ್ರಿಕತೆ ಮತ್ತು ಮಾತುಕತೆಯನ್ನು ಪ್ರತಿಪಾದಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಕಾರ್ಯದರ್ಶಿ (ಪಶ್ಚಿಮ) ತನ್ಮಯ ಲಾಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.* ಪ್ರಧಾನಿ ಮೋದಿ ಆಗಸ್ಟ್ 21-22 ರಂದು ಪೋಲೆಂಡ್‌ ಗೆ ಭೇಟಿ ನೀಡಲಿದ್ದು, ನಂತರ ಉಕ್ರೇನಿಯನ್ ರಾಷ್ಟ್ರೀಯ ದಿನವಾದ ಆಗಸ್ಟ್ 23 ರಂದು ಉಕ್ರೇನ್‌ನಲ್ಲಿರುತ್ತಾರೆ. "ಇದರೊಂದಿಗೆ ಮೋದಿ ಉಕ್ರೇನ್‌ಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿಯಾಗಲಿದ್ದಾರೆ.* ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 21 ಮತ್ತು 22ರಂದು ಪೋಲೆಂಡ್‌ಗೆ ಭೇಟಿ ನೀಡಲಿದ್ದಾರೆ. ಅದಾದ ನಂತರ ಆಗಸ್ಟ್ 23ರಂದು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.* ಉಭಯ ನಾಯಕರ ನಡುವೆ ಹಲವಾರು ದಾಖಲೆಗಳಿಗೆ ಸಹಿ ಹಾಕಲಾಗುವುದು" ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.* ರಷ್ಯಾದೊಂದಿಗಿನ ಸಂಘರ್ಷದ ನಂತರ ಮತ್ತು ಪ್ರಧಾನಿ ಮೋದಿ ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಒಂದು ತಿಂಗಳ ನಂತರ ಇದೀಗ ಯುದ್ಧ ಪೀಡಿತ ದೇಶವಾದ ಉಕ್ರೇನ್ಗೆ ಮೋದಿ ಮೊದಲ ಬಾರಿಗೆ ಪ್ರವಾಸ ಮಾಡಲಿದ್ದಾರೆ.