* ಆಗಸ್ಟ್ 22 ರಂದು ವಿಶ್ವ ಜಾನಪದ ದಿನಾಚರಣೆ ಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಿಶ್ವದಾದ್ಯಂತ ಸಾಂಸ್ಕೃತಿಕ ಸಂಪ್ರದಾಯಗಳನ್ನು ನೆನಪಿಸಿಕೊಳ್ಳಲು ಮತ್ತು ಆಚರಿಸಲು ಮೀಸಲಿಡಲಾಗಿದೆ, ಸಾಮಾನ್ಯವಾಗಿ ವಿವಿಧ ಜಾನಪದ ಕಲೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳ ಮೂಲಕ ಇದನ್ನು ಆಚರಿಸಲಾಗುತ್ತದೆ.* ಜಾನಪದ (Folklore) ಎಂಬ ಪದವನ್ನು ಬ್ರಿಟಿಷ್ ಲೇಖಕ ವಿಲಿಯಂ ಜಾನ್ ಥಾಮ್ಸ್ ಅವರು ಆಗಸ್ಟ್ 22, 1846 ರಂದು ಮೊದಲು ಬಳಸಿದರು. * ಬ್ರಿಟೀಷ್ ಪುರಾತತ್ವ ಅಧ್ಯಯನಕಾರ ಲೇಖಕ William John Thoms 1846 ರ ಆಗಸ್ಟ್ 22 ರಂದು ಅಥೇನಿಯಂ ಪತ್ರಿಕೆಯಲ್ಲಿ ಮೊದಲಬಾರಿಗೆ 'FOLKLORE' ಎನ್ನುವ ಪದ ಬಳಸುತ್ತಾನೆ. ಈ ದಿನದ ನೆನಪಿಗೆ ಜಗತ್ತಿನ ಕೆಲವು ಭಾಗಗಳಲ್ಲಿ 'ವಿಶ್ವಜಾನಪದ ದಿನ' ವನ್ನಾಗಿ ಆಚರಿಸುತ್ತೇವೆ. * ಈ ವಿಶ್ವ ಜಾನಪದ ದಿನದ ಆಚರಣೆ ಭಾರತದಲ್ಲಿಯೇ ಹೆಚ್ಚು ನಡೆಯುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ತಮಿಳುನಾಡು-ಕೇರಳ-ಆಂದ್ರ-ಕರ್ನಾಟಕದಲ್ಲಿ ಮಾತ್ರ ವಿಶ್ವಜಾನಪದ ದಿನ ಆಚರಣೆಯಾಗುತ್ತಿದೆ.* ವಿಲಿಯಂ ಜಾನ್ ಥಾಮ್ಸ್ ಎಂಬ ಬ್ರಿಟಿಷ್ ಪ್ರಾಚೀನ ಅನ್ವೇಷಕ ಅಂಬೋಸ್ ಮರ್ತಾನ್ ಎನ್ನುವ ಗುಪ್ತ ನಾಮದಲ್ಲಿ 1846ರ ಆಗಸ್ಟ್ 12ರಂದು `ದಿ ಅಥೇ ನಿಯಂ' ಎನ್ನುವ ಪತ್ರಿಕೆಗೆ ಒಂದು ಪತ್ರ ಬರೆಯುತ್ತಾನೆ. ಈ ಪತ್ರ ಅದೇ ತಿಂಗಳ 22ರಂದು ಪ್ರಕಟವಾಗುತ್ತದೆ. ಪತ್ರದಲ್ಲಿ 'ದಾಸ್ ವೋಕ್' ಮತ್ತು 'ಜನಪ್ರಿಯ ಪಳೆಯುಳಿಕೆ' ಎಂದು ಕರೆಯುತ್ತಿದ್ದ ಜನರ ಪರಂಪರೆಯ ಸಂಗತಿಗಳ ಅಧ್ಯಯನಕ್ಕೆ 'ಫೋಕ್ಲೋರ್' ಎಂದು ಕರೆಯಬಹುದೆಂದು ಸೂಚಿಸಿದ.* 'ಫೋಕ್' ಎಂದರೆ ಜನ 'ಲೋರ್' ಎಂದರೆ ಆ ಜನರ ಜ್ಞಾನ ಅಥವಾ ತಿಳಿವಳಿಕೆ ಎಂದು ವಿವರಿಸಿರಿತ್ತಾನೆ.