* ಬೆಂಗಳೂರಿನ ಲಲಿತ್ ನಲ್ಲಿ ಆಗಸ್ಟ್ 1 ರಿಂದ 3 ರವರೆಗೆ 13 ನೇ ಆವೃತ್ತಿಯ 'ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ-2024' ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ 6ಕ್ಕೂ ಹೆಚ್ಚು ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ದೇಶಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ರಾಜ್ಯ ಸರ್ಕಾರ ಮಾಹಿತಿ ಹಂಚಿಕೊಂಡಿದೆ.* ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಮೋಷನ್ ಸೊಸೈಟಿ (KSTePS) ಮತ್ತು ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (JNCASR) ಈ ಕಾರ್ಯಕ್ರಮವನ್ನು ಆಯೋಜಿಸಿದೆ.* ಈ ಸಮ್ಮೇಳನದಲ್ಲಿ 50ಕ್ಕೂ ಹೆಚ್ಚು ಸಂಸ್ಥೆಗಳಿಂದ ಪ್ರದರ್ಶನ ನಡೆಯಲಿದೆ ಅಂತ ಹೇಳಿದೆ.* ಈ ಸಮ್ಮೇಳನದ ಘೋಷವಾಕ್ಯ 'ಸುಸ್ಥಿರತೆಗಾಗಿ ನ್ಯಾನೋ ತಂತ್ರಜ್ಞಾನ, ಹವಾಮಾನ, ಇಂಧನ ಮತ್ತು ಆರೋಗ್ಯ ರಕ್ಷಣೆ' ಎಂದು ತಿಳಿಸಿದೆ.* ರಾಜ್ಯದಲ್ಲಿ ಕೈಗಾರಿಕೆ, ಶೈಕ್ಷಣಿಕ ಮತ್ತು ಸಂಶೋಧಕರಿಗೆ ಜ್ಞಾನ ವಿನಿಮಯಕ್ಕೆ ಜಾಗತಿಕ ವೇದಿಕೆಯಾಗುವ ನಿಟ್ಟಿನಲ್ಲಿ ಹಾಗೂ ನ್ಯಾನೋ ವಿಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನ ಕ್ಷೇತ್ರದ ಕೈಗಾರಿಕೆಗಳ ಅಭಿವೃದ್ಧಿಗೆ ನೆರವಾಗುವ ಪರಿಸರವನ್ನು ಸೃಷ್ಠಿಸುವ ಉದ್ದೇಶದೊಂದಿಗೆ 2007 ರಿಂದ ಪ್ರತಿ 2 ವರ್ಷಕ್ಕೊಮ್ಮೆ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಈ ಸಮ್ಮೇಳನದಲ್ಲಿ ಜಗತ್ತಿನಾದ್ಯಂತ ಸುಮಾರು 700 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.