* ಪ್ರತಿ ವರ್ಷ ಆಗಸ್ಟ್ 12 ರಂದು ಆಚರಿಸುವ ವಿಶ್ವ ಆನೆ ದಿನವು ಆನೆಗಳ ಸಂರಕ್ಷಣೆ, ರಕ್ಷಣೆ ಮತ್ತು ಕಲ್ಯಾಣದ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು ಉದ್ದೇಶಿಸಿದೆ.* 2025ರ ಥೀಮ್ “ಆನೆಗಳಿಗೆ ಸಹಾಯ ಮಾಡಲು ಜಗತ್ತನ್ನು ಒಗ್ಗೂಡಿಸುವುದು” ಎಂಬುವುದಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತುರ್ತು ಕ್ರಮಗಳ ಅಗತ್ಯತೆಯನ್ನು ಒತ್ತಿ ಹೇಳುತ್ತದೆ.* 2012ರಲ್ಲಿ ಕೆನಡಾದ ಪ್ಯಾಟ್ರಿಷಿಯಾ ಸಿಮ್ಸ್ ಮತ್ತು ಥೈಲ್ಯಾಂಡ್ನ ಎಲಿಫೆಂಟ್ ರೀಇಂಟ್ರೋಡಕ್ಷನ್ ಫೌಂಡೇಶನ್ ಇದನ್ನು ಪ್ರಾರಂಭಿಸಿದರು.* ಪ್ಯಾಟ್ರಿಷಿಯಾ ಸಿಮ್ಸ್ ಅವರ “ರಿಟರ್ನ್ ಟು ದ ಫಾರೆಸ್ಟ್” ದಸ್ತಾವೇಜು ಚಿತ್ರದ ಮೂಲಕ ಮೊದಲ ಆಚರಣೆ ನಡೆಯಿತು.* ಆನೆಗಳ ವಾಸಸ್ಥಾನ ಸಂರಕ್ಷಣೆ, ದಂತದ ಕಳ್ಳಬೇಟೆ ನಿಲ್ಲಿಸುವುದು, ಕೈದಾದ ಆನೆಗಳ ಕಲ್ಯಾಣ ಸುಧಾರಿಸುವುದು, ಸಾರ್ವಜನಿಕ ಜಾಗೃತಿ ಮೂಡಿಸುವುದು ಹಾಗೂ ಬಲವಾದ ಕಾನೂನುಗಳನ್ನು ಜಾರಿಗೆ ತರುವುದು.* ಭಾರತದ ಉಪಪ್ರಭೇದ ಎಲೆಫಾಸ್ ಮಾಕ್ಸಿಮ್ಕ್ಸ್ ಇಂಡಿಕಸ್ ಅಪಾಯದಲ್ಲಿರುವ ಜಾತಿಯಾಗಿ IUCN ಪಟ್ಟಿಯಲ್ಲಿದೆ.* ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಮೊದಲ ವೇಳಾಪಟ್ಟಿಯಲ್ಲಿ ಸೇರಿದೆ ಮತ್ತು ರಾಷ್ಟ್ರದ ಪರಂಪರೆ ಪ್ರಾಣಿಯಾಗಿದೆ.* ಪ್ರಮುಖ ಯೋಜನೆಗಳಲ್ಲಿ ಪ್ರಾಜೆಕ್ಟ್ ಎಲಿಫೆಂಟ್, ಆನೆ ಕಾರಿಡಾರ್ ಅಭಿವೃದ್ಧಿ, ಗಜಯಾತ್ರೆ ಅಭಿಯಾನ ಮತ್ತು MIKE ಪ್ರೋಗ್ರಾಂ ಸೇರಿವೆ.* ದಂತದ ಕಳ್ಳಬೇಟೆ, ವಾಸಸ್ಥಾನ ನಾಶ, ಮನುಷ್ಯ–ಆನೆ ಸಂಘರ್ಷ, ಅಕ್ರಮ ವ್ಯಾಪಾರ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ಆಹಾರ–ನೀರಿನ ಕೊರತೆ ಇವು ಆನೆಗಳಿಗಾಗುವ ಆಪಾಯಗಳಾಗಿವೆ.* ಆನೆಗಳ ವಾಸಸ್ಥಾನ ರಕ್ಷಣೆಗೆ, ಸಂಘರ್ಷ ಕಡಿಮೆ ಮಾಡಲು ಮತ್ತು ಅಕ್ರಮ ಹತ್ಯೆಗಳನ್ನು ತಡೆಯಲು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಯೋಜನೆಗಳು ಜಾರಿಗೆ ಇವೆ.ಆನೆಗಳ ಪ್ರಕಾರಗಳು :- ಆಫ್ರಿಕನ್ ಆನೆ – ದೊಡ್ಡ ಕಿವಿಗಳು, ಹೆಚ್ಚು ಗಾತ್ರ, ಉಪ-ಸಹಾರಾ ಆಫ್ರಿಕಾದಲ್ಲಿ ಕಂಡುಬರುತ್ತವೆ.- ಆಸಿಯನ್ ಆನೆ – ಚಿಕ್ಕ ಗಾತ್ರ, ಸಣ್ಣ ಕಿವಿಗಳು, ಭಾರತ ಸೇರಿದಂತೆ ಏಷ್ಯಾದ ಕೆಲವು ರಾಷ್ಟ್ರಗಳಲ್ಲಿ ಕಂಡುಬರುತ್ತವೆ.