* ಪ್ರತಿ ವರ್ಷ ಆಗಸ್ಟ್ 12 ರಂದು ಅಂತರರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಯುವಕರು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ ಸಮಾಜದ ಅಭಿವೃದ್ಧಿಯಲ್ಲಿ ಅವರ ಕೊಡುಗೆಗಳನ್ನು ಗುರುತಿಸಲು ಇದನ್ನು ಆಚರಿಸಲಾಗುತ್ತದೆ.* 2025ರ ಅಂತರರಾಷ್ಟ್ರೀಯ ಯುವ ದಿನದ ಥೀಮ್ "SDG ಗಳು ಮತ್ತು ಅದಕ್ಕೂ ಮೀರಿದ ಸ್ಥಳೀಯ ಯುವ ಕ್ರಿಯೆಗಳು" ಎಂಬುದು ಥೀಮ್ ಆಗಿದೆ.* ಪ್ರತಿ ದೇಶದ ಭವಿಷ್ಯದ ಕನಸುಗಳಾಗಿರುವ ಯುವ ಸಮೂಹಕ್ಕೆ ಅಭಿವೃದ್ಧಿಯ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ 1999 ಡಿಸೆಂಬರ್ 17ರಂದು ಯುವಕರಿಗಾಗಿಯೇ ಒಂದು ದಿನವನ್ನು ಮೀಸಲಿಡುವಂತೆ ತನ್ನ ಸದಸ್ಯ ರಾಷ್ಟ್ರಗಳಿಗೆ ಸೂಚಿಸಿತ್ತು. * ವಿಶ್ವಸಂಸ್ಥೆಯ ಸೂಚನೆಯ ಅನ್ವಯ ಸದಸ್ಯ ರಾಷ್ಟ್ರಗಳು 2000ನೇ ಇಸವಿಯಿಂದ ಪ್ರತಿ ವರ್ಷದ ಆಗಸ್ಟ್ 12ರಂದು ವಿಶ್ವಯುವ ದಿನವನ್ನು ಆಚರಿಸಲಾಗುತ್ತಿದೆ.* 1999 ರಲ್ಲಿ ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಬೇಕು ಎಂಬ ನಿರ್ಣಯವನ್ನು ವಿಶ್ವ ಸಂಸ್ಥೆಯ ಸಅಮಾನ್ಯ ಸಭೆ ಘೋಷಿಸಿತು. 1998 ರಲ್ಲಿ ಪೋರ್ಚುಗಲ್ನ ಲಿಸ್ಬನ್ನಲ್ಲಿ ವಿಶ್ವ ಯುವ ಸಮ್ಮೇಳನವನ್ನು ಆಯೋಜಿಸಲಾಗಿತ್ತು. * ಅಂತರರಾಷ್ಟ್ರೀಯ ಯುವ ದಿನದ ಉದ್ದೇಶ ಯುವಜನರು ಎದುರಿಸುತ್ತಿರುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸಲು.