* ಪ್ರತಿವರ್ಷ ಆಗಸ್ಟ್‌ 12 ರಂದು ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಣೆ ಮಾಡಲಾಗುತ್ತದೆ. ಹರ್ಷ, ಛಲ, ಶಕ್ತಿಯ ಸಂಕೇತವಾಗಿರುವ ಯುವಜನರಿಗಾಗಿಯೇ ಈ ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.* ಪ್ರತಿವರ್ಷ ಅಂತಾರಾಷ್ಟ್ರೀಯ ಯುವ ದಿನವನ್ನು ಒಂದು ಧ್ಯೇಯವಾಕ್ಯದೊಂದಿಗೆ  ಆಚರಣೆ ಮಾಡಲಾಗುತ್ತದೆ. 2023 ಅಂತಾರಾಷ್ಟ್ರೀಯ ಯುವ ದಿನದ ಧ್ಯೇಯವಾಕ್ಯ (ಥೀಮ್) Green Skill for Youth: Towards A Sustainable World (ಹಸಿರು ಕೌಶಲಗಳು: ಸುಸ್ಥಿರ ಪ್ರಪಂಚದೆಡೆಗೆ) ಎಂಬುವುದು ಈ ವರ್ಷದ ಧೈಯವಾಕ್ಯವಾಗಿದೆ.* ಪ್ರತಿ ದೇಶದ ಭವಿಷ್ಯದ ಕನಸುಗಳಾಗಿರುವ ಯುವ ಸಮೂಹಕ್ಕೆ ಅಭಿವೃದ್ಧಿಯ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ 1999 ಡಿಸೆಂಬರ್ 17ರಂದು ಯುವಕರಿಗಾಗಿಯೇ ಒಂದು ದಿನವನ್ನು ಮೀಸಲಿಡುವಂತೆ ತನ್ನ ಸದಸ್ಯ ರಾಷ್ಟ್ರಗಳಿಗೆ ಸೂಚಿಸಿತ್ತು. ವಿಶ್ವಸಂಸ್ಥೆಯ ಸೂಚನೆಯ ಅನ್ವಯ ಸದಸ್ಯ ರಾಷ್ಟ್ರಗಳು 2000ನೇ ಇಸವಿಯಿಂದ ಪ್ರತಿ ವರ್ಷದ ಆಗಸ್ಟ್ 12ರಂದು ವಿಶ್ವಯುವ ದಿನವನ್ನು ಆಚರಿಸಲಾಗುತ್ತಿದೆ.