* ಆಗಸ್ಟ್ 11ರಿಂದ ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನವು ಆಗಸ್ಟ್ 11ರಿಂದ 22ರವರೆಗೆ ನಡೆಯಲಿದ್ದು, ಒಟ್ಟು 9 ದಿನಗಳ ಕಾಲ ಕಲಾಪ ನಡೆಯಲಿದೆ.* ರಾಜ್ಯಪಾಲ ಥಾವರ ಚಂದ್ ಗೆಹ್ಲೊಟ್ ಅವರು ಜುಲೈ 18ರಂದು ಅಧಿಸೂಚನೆ ಹೊರಡಿಸಿದ್ದು, ತಾತ್ಕಾಲಿಕ ಕಾರ್ಯಕಾಲದ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ.* ಅಧಿವೇಶನದ ಮೊದಲ ಭಾಗ ಆಗಸ್ಟ್ 14ರವರೆಗೆ ನಡೆಯಲಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನ, ನಂತರದ ಶನಿವಾರ ಮತ್ತು ಭಾನುವಾರದ ರಜೆ ಹಿನ್ನೆಲೆಯಲ್ಲಿ ಮಧ್ಯಭಾಗದಲ್ಲಿ ಮೂರು ದಿನಗಳ ವಿರಾಮವಿದೆ.* ಆಗಸ್ಟ್ 18ರಂದು ಅಧಿವೇಶನ ಪುನಾರಂಭವಾಗಲಿದ್ದು, ಆಗಸ್ಟ್ 22ರವರೆಗೆ ಕಲಾಪ ಮುಂದುವರಿಯಲಿದೆ.