* ವಿಶ್ವ ಸಿಂಹ ದಿನವನ್ನು ಪ್ರತಿ ವರ್ಷ ಆಗಸ್ಟ್ 10ರಂದು ಆಚರಿಸಲಾಗುತ್ತದೆ. ಕಾಡಿನ ರಾಜ ಸಿಂಹಗಳು (ಪ್ಯಾಂಥೆರಾ ಲಿಯೋ) ಪರಿಸರದ ಸಮತೋಲನ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.* ಆದರೆ ಆಧುನೀಕರಣ, ಅಕ್ರಮ ಬೇಟೆ, ಅರಣ್ಯ ನಾಶ ಮತ್ತು ಆವಾಸಸ್ಥಾನಗಳ ಕಳೆತದಿಂದ ಇವುಗಳ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದೆ.* ಈ ದಿನದ ಆಚರಣೆ 2013ರಲ್ಲಿ ಬಿಗ್ ಕ್ಯಾಟ್ಸ್ ರೆಸ್ಕ್ಯೂ ಸಂಸ್ಥೆಯ ಸಂಸ್ಥಾಪಕರಾದ ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ ಅವರು ನ್ಯಾಷನಲ್ ಜಿಯೋಗ್ರಾಫಿಕ್ ಸಹಭಾಗಿತ್ವದಲ್ಲಿ ಪ್ರಾರಂಭಿಸಿದರು.* ಇದರ ಉದ್ದೇಶ ಸಿಂಹಗಳ ಉಳಿವಿನ ಅಗತ್ಯತೆ ಮತ್ತು ಅವುಗಳ ರಕ್ಷಣೆಯ ಮಹತ್ವವನ್ನು ಜನರಲ್ಲಿ ಜಾಗೃತಿಪಡಿಸುವುದಾಗಿದೆ.* ವಿಶ್ವ ಸಿಂಹ ದಿನವನ್ನು ಜಾಗೃತಿ ಅಭಿಯಾನಗಳು, ನಿಧಿಸಂಗ್ರಹಣೆ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಪ್ರದರ್ಶನಗಳು ಹಾಗೂ ಶಾಲೆ–ಸಮುದಾಯಗಳಲ್ಲಿ ಚರ್ಚೆಗಳ ಮೂಲಕ ಆಚರಿಸಲಾಗುತ್ತದೆ.* ಸಾಮಾಜಿಕ ಮಾಧ್ಯಮಗಳಲ್ಲಿಯೂ ವಿಶೇಷ ಅಭಿಯಾನಗಳ ಮೂಲಕ ಸಿಂಹ ಸಂರಕ್ಷಣೆಯ ಸಂದೇಶವನ್ನು ಹರಡಲಾಗುತ್ತದೆ.