Job Description: * ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಆದಿತ್ಯ ಠಾಕ್ರೆ ಹಾಗೂ ಮಧುಕೇಶ್ವರ್ ದೇಸಾಯಿ ಸೇರಿದಂತೆ ಭಾರತದ ಒಟ್ಟು ಆರು ಜನ 2023ನೇ ಸಾಲಿನ 'ಭರವಸೆಯ ಜಾಗತಿಕ ಯುವ ನಾಯಕರು' ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.* ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯು ಇಎಫ್) ಮಾರ್ಚ್ 15 ರಂದು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಟಿವಿಎಸ್ ಮೋಟರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್, ವೇಣು, ಜಿಯೊ ಹಾಪ್ಟಿಕ್ ಟೆಕ್ನಾಲಜೀಸ್ ಸಿಇಒ ಆಶ್ರಿತ್ ವೈಶ್, ಬಿಯೊಜೀನ್ ಸಿಇಒ ವಿಬಿನ್ ಬಿ.ಜೋಸೆಫ್ ಮತ್ತು ಪಾಲಿಸಿ 4.0 ರಿಸರ್ಚ್ ಫೌಂಡೇಷನ್ ಸಿಇಒ ತನ್ವಿ ರತ್ನ ರವರುಗಳು ಸ್ಥಾನ ಪಡೆದಿದ್ದಾರೆ.* 'ಭರವಸೆಯ ರಾಜಕೀಯ ನಾಯಕರು' ಪಟ್ಟಿಯಲ್ಲಿ 40 ವರ್ಷದೊಳಗಿನ ನವೋದ್ಯಮಿಗಳು, ಸಂಶೋಧಕರು, ಸಮುದಾಯ, ದೇಶ ಹಾಗೂ ಜಗತ್ತಿನಲ್ಲಿ ಮಹತ್ತರ ಬದಲಾವಣೆಯನ್ನು ತರಲು ಮುಂದಾಗಿರುವ, ದೂರದೃಷ್ಟಿಯುಳ್ಳ ಸಾಮಾಜಿಕ ಹೋರಾಟಗಾರರು ಇರುತ್ತಾರೆ ಎಂದು ಸ್ವಿಡ್ಜರ್ ಲ್ಯಾಂಡ್, ಜಿನಿವಾ ಮೂಲದ ಡಬ್ಲ್ಯು ಇಎಫ್ ತಿಳಿಸಿದೆ. * ಯಂಗ್ ಗ್ಲೋಬಲ್ ಲೀಡರ್ಸ್ (ವೈಜಿಎಲ್) ವೇದಿಕೆಯು 2004ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಪ್ರಸ್ತುತ ಈ ವೇದಿಕೆಯು 120ಕ್ಕೂ ಅಧಿಕ ದೇಶಗಳ 1,400ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ.