* ಬುಡಕಟ್ಟು ವ್ಯವಹಾರಗಳ ಸಚಿವಾಲಯವು “ಆದಿ ಕರ್ಮಯೋಗಿ ಅಭಿಯಾನ”ವನ್ನು ಅಧಿಕೃತವಾಗಿ ಆರಂಭಿಸಿದೆ.* ಇದು ವಿಶ್ವದ ಅತಿದೊಡ್ಡ ಬುಡಕಟ್ಟು ತಳಮಟ್ಟದ ನಾಯಕತ್ವ ಕಾರ್ಯಕ್ರಮವಾಗಿದ್ದು, ಬುಡಕಟ್ಟು ಸಮುದಾಯಗಳ ಸಬಲೀಕರಣ, ಸ್ಪಂದಿಸುವ ಆಡಳಿತ ಮತ್ತು ಸ್ಥಳೀಯ ನಾಯಕತ್ವಕ್ಕೆ ಅವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ.* ಗ್ರಾಮ ಮತ್ತು ಸಮುದಾಯ ಮಟ್ಟದಲ್ಲಿ ಜನಕೇಂದ್ರಿತ ಆಡಳಿತವನ್ನು ಉತ್ತೇಜಿಸುವುದು, ರಾಜ್ಯದಿಂದ ಗ್ರಾಮ ಮಟ್ಟದವರೆಗೆ ಆಡಳಿತ ಲ್ಯಾಬ್ ಕಾರ್ಯಾಗಾರಗಳನ್ನು ನಡೆಸುವುದು ಮತ್ತು “1 ಲಕ್ಷ ಬುಡಕಟ್ಟು ಗ್ರಾಮಗಳು – ವಿಷನ್ 2030” ಕ್ರಿಯಾ ಯೋಜನೆಗಳನ್ನು ರೂಪಿಸುವುದು ಇದರ ಪ್ರಮುಖ ಗುರಿಗಳು.* ಪ್ರತಿ ಬುಡಕಟ್ಟು ಹಳ್ಳಿಯಲ್ಲಿ “ಆದಿ ಸೇವಾ ಕೇಂದ್ರ”ಗಳ ಸ್ಥಾಪನೆ, ಗ್ರಾಮ ಮಟ್ಟದ ಕ್ರಿಯಾ ಯೋಜನೆ ರೂಪಣೆ, ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಸಮಗ್ರ ಅನುಷ್ಠಾನ.* ಇದರ ಮೂಲಕ 550 ಜಿಲ್ಲೆಗಳಲ್ಲಿ ಮತ್ತು 30 ರಾಜ್ಯಗಳಲ್ಲಿ 20 ಲಕ್ಷ ಬದಲಾವಣಾ ನಾಯಕರ ಜಾಲವನ್ನು ನಿರ್ಮಿಸಲಾಗುತ್ತದೆ.* “ಆದಿ ಸಹಯೋಗಿ” ಮತ್ತು “ಆದಿ ಸಾಥಿ”ಗಳ ಮೂಲಕ ಶಿಕ್ಷಕರು, ವೈದ್ಯರು, ವೃತ್ತಿಪರರು, ಸ್ವಸಹಾಯ ಸಂಘಗಳು, ಯುವಕರು ಹಾಗೂ ಸ್ಥಳೀಯ ನಾಯಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಾರೆ.* ಜೊತೆಗೆ ಸಮುದಾಯ ನಾಯಕತ್ವ ತರಬೇತಿ ಮೂಲಕ ಬುಡಕಟ್ಟು ಯುವಜನರು ಮತ್ತು ಮಹಿಳೆಯರಿಗೆ ಸಾಮರ್ಥ್ಯ ವೃದ್ಧಿ ಮಾಡಲಾಗುತ್ತದೆ.* ಅಭಿಯಾನವು ಪ್ರಧಾನಮಂತ್ರಿಯವರ “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ಪ್ರಯಾಸ್, ಸಬ್ಕಾ ವಿಶ್ವಾಸ್” ತತ್ವದ ಮೇಲೆ ಆಧಾರಿತವಾಗಿದ್ದು, 2047 ರ ವೇಳೆಗೆ ವಿಕಸಿತ ಭಾರತದ ದೃಷ್ಟಿಕೋನಕ್ಕೆ ಕೊಡುಗೆ ನೀಡುತ್ತದೆ.* ಸಚಿವ ಜುವಲ್ ಓರಂ, ರಾಜ್ಯ ಸಚಿವ ದುರ್ಗಾದಾಸ್ ಉಯಿಕೆ ಮತ್ತು ಕಾರ್ಯದರ್ಶಿ ವಿಭು ನಾಯರ್ ಅವರು ಈ ಯೋಜನೆ ತಳಮಟ್ಟದಲ್ಲಿ ಪರಿವರ್ತನಾತ್ಮಕ ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.