* ಭಾರತ ಸರ್ಕಾರವು ಆಧುನಿಕ ಕೃಷಿ ಪ್ರದೇಶಾಭಿವೃದ್ಧಿ ಮತ್ತು ನೀರು ನಿರ್ವಹಣಾ ಯೋಜನೆ (M-CADWM)ಗೆ ಅನುಮೋದನೆ ನೀಡಿದೆ* ಯೋಜನೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ (PMKSY) ಭಾಗವಾಗಿ 2025-26ರಲ್ಲಿ ಆರಂಭವಾಗಲಿದೆ* ಆರಂಭಿಕ ಹಂತದಲ್ಲಿ ₹1,600 ಕೋಟಿ ಅನುದಾನ ಹೊಂದಿದ್ದು, ದೇಶದ ನೀರಾವರಿ ಮೂಲಸೌಕರ್ಯ ಆಧುನಿಕರಣಗೊಳಿಸುವ ಉದ್ದೇಶಹೊಂದಿದೆ.* ನೀರಾವರಿ ವ್ಯವಸ್ಥೆ ಸುಧಾರಣೆ ಹಾಗೂ ಕೃಷಿ ಜಮೀನಿಗೆ ಪರಿಣಾಮಕಾರಿ ನೀರು ಪೂರೈಕೆ ಗುರಿಯಾಗಿವೆ.* ಸಣ್ಣ ರೈತರು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ಸುಮಾರು 80,000 ರೈತರಿಗೆ ಪ್ರಥಮ ಹಂತದಲ್ಲಿ ಪ್ರಯೋಜನ ಪಡೆಯಲಿದ್ದಾರೆ.* ನೀರಿನ ಬಳಕೆಯ ಪರಿಣಾಮಕಾರಿತ್ವ ಹೆಚ್ಚಿಸಲು SCADA (ಸೂಪರ್ವೈಸರಿ ಕಂಟ್ರೋಲ್ ಮತ್ತು ಡೇಟಾ ಅಕ್ವಿಸಿಷನ್) ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT) ನಂತಹ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಈ ಸಾಧನಗಳನ್ನು ಬಳಸುವುದರಿಂದ, ರೈತರು ಕೃಷಿ ಮಟ್ಟದಲ್ಲಿ ಹೆಚ್ಚಿನ ನೀರಿನ ಬಳಕೆಯ ದಕ್ಷತೆಯನ್ನು (WUE) ಸಾಧಿಸಬಹುದು.* ಭೂಗತ ಒತ್ತಡದ ಕೊಳವೆಗಳ ಮೂಲಕ 1 ಹೆಕ್ಟೇರ್ ವರೆಗಿನ ಹೊಲಗಳಿಗೆ ನೀರನ್ನು ತಲುಪಿಸುವ ವ್ಯವಸ್ಥೆ, ಇದು ಸೂಕ್ಷ್ಮ ನೀರಾವರಿ ಪದ್ಧತಿಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.* ನೀರಾವರಿ ನಿರ್ವಹಣೆಯನ್ನು ಸ್ಥಳೀಯ ನೀರಾವರಿ ಬಳಕೆದಾರರ ಸಂಘಗಳಿಗೆ (WUS) ಹಸ್ತಾಂತರಿಸಲಾಗುತ್ತದೆ.* ಪೈಲಟ್ ಯೋಜನೆಗಳ ಯಶಸ್ಸಿನ ಆಧಾರದ ಮೇಲೆ 2026 ಏಪ್ರಿಲ್ನಲ್ಲಿ ರಾಷ್ಟ್ರೀಯ ಯೋಜನೆ ರೂಪುಗೊಳ್ಳಲಿದೆ.