Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಆಧಾರ್ ಸೇವೆಗಳ ಸರಳೀಕರಣಕ್ಕೆ ‘ಉದಯ್’ ಮ್ಯಾಸ್ಕಾಟ್ ಬಿಡುಗಡೆ
9 ಜನವರಿ 2026
* ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ನಾಗರಿಕರಿಗೆ ಆಧಾರ್ ಸೇವೆಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ
‘ಉದೈ’ (Udai)
ಎಂಬ ಆಧಾರ್ ಮಾಸ್ಕಾಟ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಉಪಕ್ರಮವು ದೇಶದ ಒಂದು ಬಿಲಿಯನ್ಗೂ ಹೆಚ್ಚು ಆಧಾರ್ ಬಳಕೆದಾರರಿಗೆ ಸೇವೆಗಳ ಬಗ್ಗೆ ಸುಲಭವಾಗಿ, ಸರಳವಾಗಿ ಹಾಗೂ ಸ್ನೇಹಪರವಾಗಿ ಮಾಹಿತಿ ತಲುಪಿಸುವ ಗುರಿಯನ್ನು ಹೊಂದಿದೆ.
* ಉದೈ’ ಮಾಸ್ಕಾಟ್ನ ಉದ್ದೇಶ ಮತ್ತು ಪಾತ್ರ:
UIDAI ಪ್ರಕಾರ, ‘ಉದೈ’ ನಾಗರಿಕರಿಗೆ ಆಧಾರ್ ಸಂಬಂಧಿತ ವಿವಿಧ ಸೇವೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಸ್ನೇಹಪರ ಸಂವಹನ ಸಹಚರನಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ:
=> ಆಧಾರ್ ವಿವರಗಳ ನವೀಕರಣ
=> ಆಧಾರ್ ದೃಢೀಕರಣ (Authentication)
=> ಆಫ್ಲೈನ್ ಪರಿಶೀಲನೆ
=> ಆಯ್ಕೆಮಾಡಿದ ಮಾಹಿತಿಯ ಹಂಚಿಕೆ
=> ತಾಂತ್ರಿಕ ನವೀಕರಣಗಳು
=> ಜವಾಬ್ದಾರಿಯುತ ಆಧಾರ್ ಬಳಕೆಇತ್ಯಾದಿಗಳ ಕುರಿತು ಸರಳ ಭಾಷೆಯಲ್ಲಿ ಅರಿವು ಮೂಡಿಸುವುದು ಇದರ ಪ್ರಮುಖ ಗುರಿಯಾಗಿದೆ.
* ರಾಷ್ಟ್ರಮಟ್ಟದ ಸ್ಪರ್ಧೆ ಮತ್ತು ಆಯ್ಕೆ ಪ್ರಕ್ರಿಯೆ:
‘ಉದೈ’ ಮಾಸ್ಕಾಟ್ ಹಾಗೂ ಅದರ ಹೆಸರನ್ನು
MyGov ವೇದಿಕೆಯ ಮೂಲಕ ಆಯೋಜಿಸಲಾದ ರಾಷ್ಟ್ರಮಟ್ಟದ ಮುಕ್ತ ಸ್ಪರ್ಧೆಗಳ
ಮೂಲಕ ಆಯ್ಕೆ ಮಾಡಲಾಗಿದೆ. ದೇಶದಾದ್ಯಂತ ವಿದ್ಯಾರ್ಥಿಗಳು, ವೃತ್ತಿಪರರು ಹಾಗೂ ವಿನ್ಯಾಸಕರಿಂದ ಒಟ್ಟು
875 ಪ್ರವೇಶಗಳು
ಬಂದಿದ್ದವು. ಪಾರದರ್ಶಕತೆ ಮತ್ತು ಅರ್ಹತೆಯ ಆಧಾರದ ಮೇಲೆ ಬಹು ಹಂತದ ಮೌಲ್ಯಮಾಪನ ಪ್ರಕ್ರಿಯೆ ಅನುಸರಿಸಲಾಯಿತು.
# ಮಾಸ್ಕಾಟ್ ವಿನ್ಯಾಸ ವಿಭಾಗದಲ್ಲಿ:
1. ಪ್ರಥಮ ಬಹುಮಾನ: ಅರುಣ್ ಗೋಕುಲ್ (ತ್ರಿಶೂರ್, ಕೇರಳ)
2. ದ್ವಿತೀಯ ಬಹುಮಾನ: ಇದ್ರಿಸ್ ದವೈವಾಲಾ (ಪುಣೆ)
3. ತೃತೀಯ ಬಹುಮಾನ: ಕೃಷ್ಣ ಶರ್ಮಾ (ಘಾಜಿಪುರ್)
# ‘ಉದೈ’ ಎಂಬ ಹೆಸರಿನ ಆಯ್ಕೆ ಮತ್ತು ನಾಗರಿಕ ಭಾಗವಹಣೆ:
ಮಾಸ್ಕಾಟ್ ಹೆಸರಿನ ವಿಭಾಗದಲ್ಲಿ:
1. ಪ್ರಥಮ ಬಹುಮಾನ: ರಿಯಾ ಜೈನ್ (ಭೋಪಾಲ್)
2. ದ್ವಿತೀಯ ಬಹುಮಾನ: ಇದ್ರಿಸ್ ದವೈವಾಲಾ (ಪುಣೆ)
3.ತೃತೀಯ ಬಹುಮಾನ: ಮಹಾರಾಜ್ ಸರಣ್ ಚೆಲ್ಲಪಿಲ್ಲಾ (ಹೈದರಾಬಾದ್)
ಈ ವ್ಯಾಪಕ ಸಾರ್ವಜನಿಕ ಭಾಗವಹಣೆ, ಆಧಾರ್ ಅನ್ನು
ಸಾರ್ವಜನಿಕ ಡಿಜಿಟಲ್ ಸಂಪತ್ತಾಗಿ
(Public Digital Good) ರೂಪಿಸುವಲ್ಲಿ ನಾಗರಿಕರ ಪಾತ್ರದ ಮಹತ್ವವನ್ನು ತೋರಿಸಿದೆ.
* ‘ಉದೈ’ ಮಾಸ್ಕಾಟ್ ಅನ್ನು UIDAI ಅಧ್ಯಕ್ಷ
ನೀಲಕಂಠ ಮಿಶ್ರಾ
ಅವರು ತಿರುವನಂತಪುರದಲ್ಲಿ ನಡೆದ ಸಮಾರಂಭದಲ್ಲಿ ಅನಾವರಣಗೊಳಿಸಿದರು. ಈ ವೇಳೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗೌರವಿಸಲಾಯಿತು. UIDAI ಸಿಇಒ
ಭುವನೇಶ್ ಕುಮಾರ್
ಅವರು, ಇಂತಹ ಭಾಗವಹಿಸುವಿಕೆ ಆಧಾರಿತ ಉಪಕ್ರಮಗಳು ನಾಗರಿಕರಲ್ಲಿ ವಿಶ್ವಾಸ ಮತ್ತು ಸ್ವೀಕಾರ್ಯತೆಯನ್ನು ಹೆಚ್ಚಿಸುತ್ತವೆ ಎಂದು ಹೇಳಿದರು. ಉಪ ಮಹಾನಿರ್ದೇಶಕ
ವಿವೇಕ್ ಸಿ. ವರ್ಮಾ
ಅವರು, ‘ಉದೈ’ UIDAIಯ ನಾಗರಿಕ ಕೇಂದ್ರೀಕೃತ ಸಂವಹನ ಮತ್ತು ಜವಾಬ್ದಾರಿಯುತ ಆಧಾರ್ ಬಳಕೆಯ ಪ್ರಯತ್ನಗಳಿಗೆ ಮಾರ್ಗದರ್ಶಕನಾಗಲಿದೆ ಎಂದು ತಿಳಿಸಿದರು.
Take Quiz
Loading...