* ಆಂಧ್ರಪ್ರದೇಶದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಆಗಸ್ಟ್ 15ರಿಂದ ಆರಂಭವಾಗಲಿದೆ ಎಂದು ಸಚಿವ ಕೆ. ಪಾರ್ಥಸಾರಥಿ ಘೋಷಿಸಿದ್ದಾರೆ. ಈ ಯೋಜನೆಗೆ ‘ಸ್ತ್ರೀ ಶಕ್ತಿ’ ಎಂದು ಹೆಸರು ನೀಡಲಾಗಿದೆ.* ಯೋಜನೆಗೆ ವಾರ್ಷಿಕ ₹1,942 ಕೋಟಿ, ಮಾಸಿಕ ₹162 ಕೋಟಿ ವೆಚ್ಚವಾಗಲಿದೆ. ರಾಜ್ಯದಾದ್ಯಂತ ಜಾರಿಗೊಳಿಸಲಾಗಲಿದ್ದು, ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.* ಎಪಿಎಸ್ಆರ್ಟಿಸಿಯ 11,449 ಬಸ್ಗಳಲ್ಲಿ 8,456 (ಸುಮಾರು 75%) ಬಸ್ಗಳು ಈ ಯೋಜನೆಗೆ ಒಳಪಡಲಿವೆ. ಪಲ್ಲೆ ವೆಲುಗು, ಅಲ್ಟ್ರಾ ಪಲ್ಲೆ ವೆಲುಗು, ಸಿಟಿ ಆರ್ಡಿನರಿ ಮತ್ತು ಮೆಟ್ರೊ ಎಕ್ಸ್ಪ್ರೆಸ್ ಬಸ್ಗಳಲ್ಲಿ ಉಚಿತ ಪ್ರಯಾಣ ಅವಕಾಶ ದೊರೆಯಲಿದೆ.* ಈ ಯೋಜನೆಯಿಂದ ವಾರ್ಷಿಕವಾಗಿ 1.4 ಕೋಟಿ ಮಹಿಳೆಯರಿಗೆ ಪ್ರಯೋಜನವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.