* ಚಿತ್ರರಂಗದ ಗೌರವಾನ್ವಿತ ಪ್ರಶಸ್ತಿಯಾದ 97ನೇ ಆಸ್ಕರ್ ಪುರಸ್ಕಾರ ಸಮಾರಂಭ ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ ಭಾರತೀಯ ಕಾಲಮಾನಕ್ಕೆ ಅನುಗುಣವಾಗಿ ಸೋಮವಾರ (ಮಾರ್ಚ್ 03) ನಡೆದಿದ್ದು, ಸಿಂಡ್ರೆಲ್ಲಾ ಕಥೆಯನ್ನು ಆಧರಿಸಿದ ‘ಅನೋರಾ’ ಚಿತ್ರಕ್ಕೆ ಶ್ರೇಷ್ಠ ಚಿತ್ರ ಪ್ರಶಸ್ತಿ ದೊರಕಿದೆ.* ಇದೇ ಚಿತ್ರಕ್ಕಾಗಿ ನಿರ್ದೇಶಕ ಶಾನ್ ಬೇಕರಿಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಅನೋರಾ ಚಲನಚಿತ್ರವನ್ನು 52 ಕೋಟಿ ರೂಪಾಯಿ ಖರ್ಚಿನಲ್ಲಿ ನಿರ್ಮಿಸಲಾಗಿದೆ, ಇದು ನರ್ತಕಿಯೊಬ್ಬಳು ರಷ್ಯಾದ ಪ್ರಭಾವಿಯೊಬ್ಬನ ಮಗನೊಂದಿಗೆ ಓಡಿಹೋಗುವ ಕಥೆಯಾಗಿದೆ.* ‘ಅನೋರಾ’ ಚಿತ್ರದ ನಾಯಕಿ ಮೈಕಿ ಮ್ಯಾಡಿಸನ್ ಉತ್ತಮ ನಟಿ ಹಾಗೂ ‘ದಿ ಬ್ರೂಟಲಿಸ್ಟ್’ ಚಿತ್ರದ ಏಡ್ರಿಯೆನ್ ಬ್ರೋಡಿ ಉತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಅನೋರಾಗೇ 5 ಪ್ರಶಸ್ತಿ: ಉತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಅನೋರಾ ಚಿತ್ರಕ್ಕೆ, ಉತ್ತಮ ನಿರ್ದೇಶ, ಉತ್ತಮ ನಟಿ, ಉತ್ತಮ ಮೂಲ ಚಿತ್ರಕಥೆ ಹಾಗೂ ಉತ್ತಮ ಎಡಿಟಿಂಗ್ ಪ್ರಶಸ್ತಿಗಳನ್ನೂ ಏಕಕಾಲಕ್ಕೆ ಬಾಚಿಕೊಂಡಿದೆ.* ‘ಅನೋರಾ’ ಚಿತ್ರದ ನಾಯಕಿ ಮೈಕಿ ಮ್ಯಾಡಿಸನ್ ಶ್ರೇಷ್ಠ ನಟಿಯಾಗಿದ್ದು, ‘ದಿ ಬ್ರೂಟಲಿಸ್ಟ್’ ಚಿತ್ರದ ಏಡ್ರಿಯೆನ್ ಬ್ರೋಡಿ ಶ್ರೇಷ್ಠ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ.* ಅನೋರಾಗೇ 5 ಪುರಸ್ಕಾರ: ಶ್ರೇಷ್ಠ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಅನೋರಾ ಚಿತ್ರಕ್ಕೆ, ಶ್ರೇಷ್ಠ ನಿರ್ದೇಶನ, ಶ್ರೇಷ್ಠ ನಟಿ, ಶ್ರೇಷ್ಠ ಮೂಲ ಕಥೆ ಹಾಗೂ ಶ್ರೇಷ್ಠ ಸಂಪಾದನಾ ಪುರಸ್ಕಾರಗಳನ್ನೂ ಏಕಕಾಲಕ್ಕೆ ಪಡೆದುಕೊಂಡಿದೆ.* ಭಾರತದ ಅನುಜಾಗೆ ತಪ್ಪಿದ ಪ್ರಶಸ್ತಿಅತ್ಯುತ್ತಮ ಲೈವ್ ಆಕ್ಷನ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಕಿರುಚಿತ್ರ ಅನುಜಾ ಆಸ್ಕರ್ ಗೌರವ ಗೆಲ್ಲಲು ವಿಫಲವಾಯಿತು. ಬದಲಾಗಿ ‘ಐ ಆ್ಯಮ್ ನಾಟ್ ಅ ರೋಬೋಟ್’ ಎಂಬ ವಿಜ್ಞಾನ ಸಿನಿಮಾಗೆ ಆ ಗೌರವ ಲಭಿಸಿತು. ಅದಕ್ಕೂ ಮುನ್ನ ಆಸ್ಕರ್ಗೆ ಆಯ್ಕೆಯಾಗಿದ್ದ ಬಾಲಿವುಡ್ ಚಲನಚಿತ್ರ ಲಾಪತಾ ಲೇಡೀಸ್ ಪೈಪೋಟಿಯಿಂದ ಹೊರಬಿತ್ತು.* ‘ಅನೋರಾ’ದ ನಿರ್ದೇಶಕ ಸೀನ್ ಬೇಕರ್ ಅವರು ವೈಯಕ್ತಿಕವಾಗಿ ನಾಲ್ಕು ಆಸ್ಕರ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಈ ಮೂಲಕ ಅವರು 1954ರಲ್ಲಿ ನಾಲ್ಕು ವಿಭಿನ್ನ ಚಿತ್ರಗಳಿಗೆ ಪ್ರಶಸ್ತಿ ಪಡೆದಿದ್ದ ವಾಲ್ಟ್ ಡಿಸ್ನಿ ಅವರ ದಾಖಲೆ ಸರಿಗಟ್ಟಿದರು.* ಪ್ರಶಸ್ತಿ ವಿವರಅತ್ಯುತ್ತಮ ಚಿತ್ರ: ಅನೋರಾಅತ್ಯುತ್ತಮ ನಿರ್ದೇಶಕ: ಸೀನ್ ಬೇಕರ್ (ಅನೋರಾ)ಅತ್ಯುತ್ತಮ ನಟ: ಆ್ಯಡ್ರಿಯನ್ ಬ್ರಾಡಿ (ದಿ ಬ್ರೂಟಲಿಸ್ಟ್)ಅತ್ಯುತ್ತಮ ನಟಿ: ಮೈಕಿ ಮ್ಯಾಡಿಸನ್ (ಅನೋರಾ)ಅತ್ಯುತ್ತಮ ಪೋಷಕ ನಟ: ಕೀರನ್ ಕುಲ್ಕಿನ್ (ಎ ರಿಯಲ್ ಪೇನ್)ಅತ್ಯುತ್ತಮ ಪೋಷಕ ನಟಿ: ಜೋ ಸಲ್ಡಾನಾ (ಎಮಿಲಿಯಾ ಪೆರೆಜ್)ಅತ್ಯುತ್ತಮ ಮೂಲ ಚಿತ್ರಕಥೆ: ಸೀನ್ ಬೇಕರ್ (ಅನೋರಾ)ಅತ್ಯುತ್ತಮ ರೂಪಾಂತರ ಚಿತ್ರಕಥೆ : ಪೀಟರ್ ಸ್ಟ್ರಾಘನ್ (ಕಾನ್ಕ್ಲೇವ್)ಅತ್ಯುತ್ತಮ ಅಂತರರಾಷ್ಟ್ರೀಯ ಸಿನಿಮಾ: ಐ ಆ್ಯಮ್ ಸ್ಟಿಲ್ ಹಿಯರ್ (ಬ್ರೆಜಿಲ್)ಅತ್ಯುತ್ತಮ ಅನಿಮೇಟೆಡ್ ಚಿತ್ರ: ಫ್ಲೊಅತ್ಯುತ್ತಮ ಸಾಕ್ಷ್ಯಚಿತ್ರ: ನೋ ಅದರ್ ಲ್ಯಾಂಡ್ಅತ್ಯುತ್ತಮ ಚಿತ್ರ ಸಂಕಲನ: ಸೀನ್ ಬೇಕರ್ (ಅನೋರಾ)ಅತ್ಯುತ್ತಮ ವಸ್ತು ವಿನ್ಯಾಸ: ಪೌಲ್ ಟಾಜ್ವೆಲ್ (ವಿಕೆಡ್)ಅತ್ಯುತ್ತಮ ನಿರ್ಮಾಣ ವಿನ್ಯಾಸ: ನಾಥನ್ ಕ್ರೌಲಿ ಮತ್ತು ಲೀ ಸ್ಯಾಂಡರ್ಸ್ (ವಿಕೆಡ್)ಅತ್ಯುತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ: ದಿ ಸಬ್ಸ್ಟ್ಯಾನ್ಸ್