* ಕೇಂದ್ರ ಸರ್ಕಾರವು ಡಿಸೆಂಬರ್ 9, 2025 ರಂದು ಸಂಸತ್ತಿಗೆ ತಿಳಿಸಿದಂತೆ, 8ನೇ ಕೇಂದ್ರೀಯ ವೇತನ ಆಯೋಗವನ್ನು ಅಧಿಕೃತವಾಗಿ ರಚಿಸಲಾಗಿದೆ. ಈ ಆಯೋಗದ ಕಾರ್ಯಪದ್ಧತಿ ಮತ್ತು ಪರಿಶೀಲನಾ ಚೌಕಟ್ಟನ್ನು ವಿವರಿಸುವ “Terms of Reference (ToR)” ಅನ್ನು ನವೆಂಬರ್ 3, 2025ರಂದು ಪ್ರಕಟಿಸಲಾಗಿದೆ. * ದೇಶದ ಸುಮಾರು 50.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 69 ಲಕ್ಷ ಪಿಂಚಣಿದಾರರು ಈ ಆಯೋಗದ ವ್ಯಾಪ್ತಿಗೆ ಬರುತ್ತಾರೆ. ವೇತನ, ಭತ್ತೆಗಳು, ಪಿಂಚಣಿ ಹಾಗೂ ಇತರ ಸೌಲಭ್ಯಗಳ ಪರಿಷ್ಕರಣೆ ಕುರಿತು ಶಿಫಾರಸುಗಳನ್ನು ನೀಡುವುದು ಆಯೋಗದ ಮುಖ್ಯ ಜವಾಬ್ದಾರಿ. ರಚನೆಯ ದಿನಾಂಕದಿಂದ 18 ತಿಂಗಳಲ್ಲಿ — ಅಂದರೆ 2027ರ ಮಧ್ಯಭಾಗದೊಳಗೆ — ಶಿಫಾರಸುಗಳನ್ನು ಸಲ್ಲಿಸುವ ಗಡುವು ನಿಗದಿಯಾಗಿದೆ. * ಆದರೆ, ಅವುಗಳನ್ನು ಸರ್ಕಾರ ಅಧಿಕೃತವಾಗಿ ಯಾವಾಗ ಅಂಗೀಕರಿಸುತ್ತದೆ, ಜಾರಿಗೆ ತರುತ್ತದೆ ಎಂಬುದಕ್ಕೆ ಇನ್ನೂ ಖಚಿತ ದಿನಾಂಕವಿಲ್ಲ. ಕೆಲವು ಶಿಫಾರಸ್ಸುಗಳು 2026ರ ಜನವರಿಯಿಂದ ಹಿಂದಿನ ದಿನಾಂಕದಿಂದಲೇ ಅನ್ವಯಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ಸೂಚಿಸುತ್ತವೆ.