* 2024ರಲ್ಲಿ ಭಾರತದಲ್ಲಿ 84 ಬಾರಿ ಇಂಟರ್ ನೆಟ್ ಸೇವೆ ಸ್ಥಗಿತಗೊಂಡಿದ್ದು, ಇದು ಇಡೀ ವಿಶ್ವದಲ್ಲೇ ಎರಡನೇ ಅತ್ಯಧಿಕ ಸಂಖ್ಯೆಯಾಗಿದೆ ಎಂದು ಡಿಜಿಟಲ್ ಹಕ್ಕುಗಳ ಸಂಘಟನೆ Access Now ಹೇಳಿದೆ.* ಮ್ಯಾನ್ಮಾರ್ ನಲ್ಲಿ ಸೇನಾಧಿಕಾರಿ ಜುಂಟಾ 85 ಬಾರಿ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದು, ಇದು ಇಡೀ ವಿಶ್ವದಲ್ಲೇ ಅತ್ಯಧಿಕವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.* ಕಳೆದ ಆರು ವರ್ಷಗಳಲ್ಲಿ ಪ್ರಥಮವಾಗಿ, ಜಾಗತಿಕವಾಗಿ ಅತ್ಯಧಿಕ ಇಂಟರ್ನೆಟ್ ಸ್ಥಗಿತಗೊಳಿಸಿದ ದೇಶಗಳ ಪಟ್ಟಿಯಲ್ಲಿ ಭಾರತ ಉಲ್ಲೇಖವಾಗಿಲ್ಲ ಎಂದು ವರದಿ ತಿಳಿಸಿದೆ.* 2023ರಲ್ಲಿ 116 ಬಾರಿ ಇಂಟರ್ನೆಟ್ ಸ್ಥಗಿತಗೊಂಡಿದ್ದರೆ, 2024ರಲ್ಲಿ ಈ ಸಂಖ್ಯೆ 84ಕ್ಕೆ ಇಳಿಯಿತು. ಪ್ರಜಾತಂತ್ರ ದೇಶವಾದ ಭಾರತದಲ್ಲಿ ಈಗಲೂ ಇಂಟರ್ನೆಟ್ ಸ್ಥಗಿತಗೊಳಿಸುವ ಮಟ್ಟದಲ್ಲೇ ಉಳಿದಿದೆ ಎಂದು ವರದಿ ತಿಳಿಸಿದೆ.* ಭಾರತದಲ್ಲಿ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇಂಟರ್ ನೆಟ್ ಸೇವೆ ಸ್ಥಗಿತವನ್ನು ಅನುಭವಿಸಿದ್ದು, ಮಣಿಪುರ (21) ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಹರ್ಯಾಣ (12) ಹಾಗೂ ಜಮ್ಮು ಮತ್ತು ಕಾಶ್ಮೀರ (12) ಇವೆ.* 85 ಇಂಟರ್ ನೆಟ್ ಸೇವೆ ಸ್ಥಗಿತ ಪ್ರಕರಣಗಳ ಪೈಕಿ 41 ಪ್ರಕರಣಗಳು ಪ್ರತಿಭಟನೆಗಳಿಗೆ ಸಂಬಂಧಿಸಿದ್ದಾಗಿದ್ದು, 21 ಪ್ರಕರಣಗಳು ಕೋಮುಗಲಭೆಗಳಿಗೆ ಸಂಬಂಧಿಸಿವೆ.* ಕಳೆದ ವರ್ಷ ನಡೆದಿದ್ದ ಸರಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳ ಸಂದರ್ಭದಲ್ಲಿ ಪ್ರಾಧಿಕಾರಗಳು ಐದು ಬಾರಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ.* 2024ರಲ್ಲಿ 54 ದೇಶಗಳಲ್ಲಿ 296 ಇಂಟರ್ನೆಟ್ ಸ್ಥಗಿತ ಪ್ರಕರಣಗಳು ದಾಖಲಾಗಿದ್ದು, 2023ರ 283 ಪ್ರಕರಣಗಳಿಗಿಂತ ಹೆಚ್ಚಾಗಿದೆ.* “ವರ್ಷದಿಂದ ವರ್ಷಕ್ಕೆ ಗಲಭೆ, ಪ್ರತಿಭಟನೆಗಳು, ಚುನಾವಣೆಗಳು ಹಾಗೂ ಪರೀಕ್ಷೆಗಳು ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲು ಪ್ರಾಧಿಕಾರಗಳ ಪಾಲಿಗೆ ಸ್ಥಿರ ಕಾರಣಗಳಾಗಿ ಹೊರ ಹೊಮ್ಮಿವೆ” ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.* 2024ರಲ್ಲಿ ವಿಶ್ವಾದ್ಯಂತ ಇಂಟರ್ ನೆಟ್ ಸೇವೆ ಸ್ಥಗಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, 2023ರಲ್ಲಿ 39 ದೇಶಗಳಲ್ಲಿ 283 ಇಂಟರ್ ನೆಟ್ ಸೇವೆ ಸ್ಥಗಿತ ಪ್ರಕರಣಗಳಿದ್ದದ್ದು, 2024ರಲ್ಲಿ 54 ದೇಶಗಳಲ್ಲಿ 296ಕ್ಕೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.* ಇಂಟರ್ ನೆಟ್ ಸೇವೆ ಸ್ಥಗಿತದಲ್ಲಿ ಪಾಕಿಸ್ತಾನ ಮೂರನೆಯ ಸ್ಥಾನದಲ್ಲಿದ್ದು, ಅಲ್ಲಿ ಒಟ್ಟು 21 ಬಾರಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನಂತರದ ಸ್ಥಾನದಲ್ಲಿರುವ ರಷ್ಯಾ 13 ಬಾರಿ, ಉಕ್ರೇನ್ ನಲ್ಲಿ 7 ಬಾರಿ ಫೆಲೆಸ್ತೀನ್ ನಲ್ಲಿ ಆರು ಬಾರಿ ಹಾಗೂ ಬಾಂಗ್ಲಾದೇಶದಲ್ಲಿ ಐದು ಬಾರಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.