* ಭಾರತ ಪುರುಷರ ಹಾಕಿ ತಂಡವು 8 ವರ್ಷಗಳ ನಂತರ ಏಷ್ಯಾಕಪ್ ಗೆದ್ದು ವಿಜಯೋತ್ಸವ ಆಚರಿಸಿದೆ.* ದಿಲ್ಪ್ರೀತ್ ಸಿಂಗ್ ಅವರ ಎರಡು ಗೋಲ್ಗಳು ಹಾಗೂ ಅಧಿಕಾರಯುತ ಪ್ರದರ್ಶನದ ನೆರವಿನಿಂದ ಭಾರತ, ಫೈನಲ್ನಲ್ಲಿ ದಕ್ಷಿಣ ಕೊರಿಯಾವನ್ನು 4-1 ಗೋಲ್ಗಳಿಂದ ಸೋಲಿಸಿತು. ಇದರಿಂದ ಭಾರತ ಒಟ್ಟಾರೆ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.* ಸುಖ್ಜೀತ್ ಸಿಂಗ್, ಅಮಿತ್ ರೋಹಿದಾಸ್ ತಲಾ ಒಂದು ಗೋಲ್ ಗಳಿಸಿದ್ದು, ಕೊರಿಯಾ ಪರ ಡಯಾನ್ ಸನ್ ಏಕೈಕ ಗೋಲ್ ಗಳಿಸಿದರು. * ಗುಂಪು ಹಂತದಿಂದಲೇ ಅಜೇಯ ದಾಖಲೆ ಕಾಯ್ದುಕೊಂಡ ಭಾರತ, ಸೂಪರ್ 4 ಮತ್ತು ಫೈನಲ್ವರೆಗೂ ಅದೇ ರೀತಿ ಮುಂದುವರೆಯಿತು.* ಈ ಗೆಲುವಿನೊಂದಿಗೆ ಭಾರತ ತಂಡ 2026ರಲ್ಲಿ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ನಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ಗೆ ನೇರ ಪ್ರವೇಶ ಪಡೆದಿದೆ. ಅಭಿಮಾನಿಗಳ ಪ್ರೋತ್ಸಾಹದಿಂದ ಆಟಗಾರರು ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿ ಮೇಲುಗೈ ಸಾಧಿಸಿದರು.* ಇನ್ನೊಂದೆಡೆ, ಮಲೇಷ್ಯಾ ಮೂರನೇ ಸ್ಥಾನಕ್ಕಾಗಿ ಚೀನಾವನ್ನು 3-0 ಗೋಲ್ಗಳಿಂದ ಮಣಿಸಿದರೆ, ಜಪಾನ್ ಬಾಂಗ್ಲಾದೇಶವನ್ನು 5-0 ಗೋಲ್ಗಳಿಂದ ಸೋಲಿಸಿ 5ನೇ ಸ್ಥಾನದಲ್ಲಿ ಮುಗಿಸಿತು.