Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 78ನೇ ಪುಣ್ಯಸ್ಮರಣೆ: ರಾಜ್ಘಾಟ್ನಲ್ಲಿ ಗಣ್ಯರಿಂದ ನಮನ
Authored by:
Basavaraj Halli
Date:
31 ಜನವರಿ 2026
➤ 1948ರ ಜನವರಿ 30ರಂದು ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ನಾಥೂರಾಮ್ ಗೋಡ್ಸೆಯಿಂದ ಹತ್ಯೆಗೀಡಾದರು. ಅಹಿಂಸೆ ಮತ್ತು ಸತ್ಯದ ಹಾದಿಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಈ ಮಹಾನ್ ಚೇತನದ ಬಲಿದಾನವನ್ನು ಗೌರವಿಸಲು ಮತ್ತು ಅವರ ಸ್ಮರಣೆಗಾಗಿ ಪ್ರತಿವರ್ಷ ಜನವರಿ 30 ಅನ್ನು ದೇಶಾದ್ಯಂತ
'ಹುತಾತ್ಮರ ದಿನ' (Martyrs' Day)
ಎಂದು ಆಚರಿಸಲಾಗುತ್ತದೆ. ಈ ವರ್ಷ್ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ
78ನೇ ಪುಣ್ಯತಿಥಿಯನ್ನು (ಹುತಾತ್ಮರ ದಿನ)
ದೇಶಾದ್ಯಂತ ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ದೆಹಲಿಯ ಯಮುನಾ ನದಿತೀರದಲ್ಲಿರುವ ಗಾಂಧೀಜಿಯವರ ಸಮಾಧಿ ಸ್ಥಳವಾದ 'ರಾಜ್ಘಾಟ್'ನಲ್ಲಿ ರಾಷ್ಟ್ರಪತಿಗಳು ಮತ್ತು ಪ್ರಧಾನಿಯವರು ಪುಷ್ಪನಮನ ಸಲ್ಲಿಸಿದರು.
➤ ರಾಷ್ಟ್ರಪತಿ
ದ್ರೌಪದಿ ಮುರ್ಮು
, ಪ್ರಧಾನಿ
ನರೇಂದ್ರ ಮೋದಿ
, ಕೇಂದ್ರ ಸಚಿವ
ಅಮಿತ್ ಶಾ
ಸೇರಿದಂತೆ ಹಲವು ಗಣ್ಯರು ರಾಜ್ಘಾಟ್ಗೆ ಭೇಟಿ ನೀಡಿ ಬಾಪೂಜಿಯವರ ಸ್ಮರಣಾರ್ಥ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸರ್ವಧರ್ಮ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು.
➤ ಸಾಮಾಜಿಕ ಜಾಲತಾಣ 'X' ನಲ್ಲಿ ಸಂದೇಶ ಹಂಚಿಕೊಂಡ
ಪ್ರಧಾನಿ ಮೋದಿ ಅವರು:
ಗಾಂಧೀಜಿಯವರ ಆದರ್ಶಗಳು ಮತ್ತು ಅವರು
'ಸ್ವದೇಶಿ'
ವಸ್ತುಗಳಿಗೆ ನೀಡಿದ ಪ್ರಾಮುಖ್ಯತೆಯೇ ಇಂದು ಭಾರತವನ್ನು 'ಸ್ವಾವಲಂಬಿ' (ಆತ್ಮನಿರ್ಭರ) ರಾಷ್ಟ್ರವಾಗುವತ್ತ ಮುನ್ನಡೆಸುತ್ತಿದೆ. ಮತ್ತು ಬಾಪೂಜಿಯವರ ವ್ಯಕ್ತಿತ್ವ ಮತ್ತು ಸಾಧನೆಗಳು ಪ್ರತಿಯೊಬ್ಬ ಭಾರತೀಯನನ್ನು 'ಕರ್ತವ್ಯ'ದ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತವೆ ಎಂದು ತಿಳಿಸಿದರು.
➤
ಕೇಂದ್ರ ಸಚಿವ ಅಮಿತ್ ಶಾ ಅಭಿಮತ:
ಭಾಷೆ, ಪ್ರಾಂತ್ಯ ಮತ್ತು ಜಾತಿಗಳಿಂದ ವಿಭಜನೆಗೊಂಡಿದ್ದ ಭಾರತವನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಚಳವಳಿಗೆ ಅಪ್ರತಿಮ ಬಲ ನೀಡಿದವರು ಗಾಂಧೀಜಿ. ಅವರ ಸ್ವಚ್ಛತೆ ಮತ್ತು ಸ್ವಾವಲಂಬನೆಯ ಕನಸು ನವ ಭಾರತಕ್ಕೆ ದಾರಿದೀಪವಾಗಿದೆ ಎಂದು ಅಮಿತ್ ಶಾ ಬಣ್ಣಿಸಿದರು.
Take Quiz
Loading...