* ನೂತನ ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರ ₹ 75ರ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ಮೇ 25 ರಂದು (ಗುರುವಾರ) ತಿಳಿಸಲಾಗಿದ್ದು, ಸಂಸತ್ತಿನ ನೂತನ ಭವನವನ್ನು ಪ್ರಧಾನಿ ನರೇಂದ್ರ ಮೋದಿಯವರು ಮೇ 28 ರಂದುಉದ್ಘಾಟನೆ ಮಾಡಲಿದ್ದಾರೆ. * ನಾಣ್ಯದ ಒಂದು ಬದಿಯು ಅಶೋಕ ಸ್ತಂಭದ ಸಿಂಹದ ಲಾಂಛನ, ಅದರ ಕೆಳಗೆ “ಸತ್ಯಮೇವ ಜಯತೆ” ಎಂಬ ಪದಗಳಿದ್ದು, ಎಡಭಾಗದಲ್ಲಿ “ಭಾರತ” ಎಂಬ ಪದವನ್ನು ದೇವನಾಗರಿ ಲಿಪಿಯಲ್ಲಿ ಮತ್ತು ಬಲಭಾಗದಲ್ಲಿ “ಇಂಡಿಯಾ” ಎಂಬ ಪದವನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗುತ್ತದೆ.* ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ನಾಣ್ಯವು 44 ಮಿಲಿಮೀಟರ್ ವ್ಯಾಸವನ್ನು ಹೊಂದಿರುವ ವೃತ್ತಾಕಾರದಲಿದ್ದು, 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಒಳಗೊಂಡಿರುವ ನಾಲ್ಕು ಭಾಗಗಳ ಮಿಶ್ರಲೋಹದಿಂದ 35-ಗ್ರಾಂನ ನಾಣ್ಯವನ್ನು ತಯಾರಿಸಲಾಗುತ್ತದೆ.