* ಆದಾಯ ತೆರಿಗೆ ಇಲಾಖೆ ಸೋಮವಾರ(ಆಗಸ್ಟ್ 15) ಘೋಷಣೆ ಮಾಡಿದ್ದು, ದಂಡವಿಲ್ಲದೆ ಐಟಿಆರ್ ಸಲ್ಲಿಸಲು ನೀಡಿದ್ದ ಸೆಪ್ಟೆಂಬರ್ 15ರ ಗಡುವನ್ನು ಒಂದು ದಿನ ವಿಸ್ತರಿಸಿ ಸೆಪ್ಟೆಂಬರ್ 16ರವರೆಗೆ ಮಾಡಲಾಗಿದೆ. * ಪೋರ್ಟಲ್ನಲ್ಲಿ ಲಾಗಿನ್ ಸಮಸ್ಯೆ ಉಂಟಾಗಿದೆ ಎಂದು ಹಲವರು ದೂರಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.* 2025-26ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ ಈಗಾಗಲೇ 7 ಕೋಟಿಗೂ ಹೆಚ್ಚು ಐಟಿಆರ್ಗಳು ಸಲ್ಲಿಕೆ ಆಗಿವೆ ಎಂದು ಇಲಾಖೆ ತಿಳಿಸಿದೆ. ಕಳೆದ ವರ್ಷ ಜುಲೈ 31ರೊಳಗೆ 7.28 ಕೋಟಿ ಐಟಿಆರ್ ಸಲ್ಲಿಕೆಯಾಗಿತ್ತು.* ತೆರಿಗೆದಾರರಿಗೆ ಸಹಾಯ ಮಾಡಲು ಸಹಾಯವಾಣಿ 24x7 ಕಾರ್ಯನಿರ್ವಹಿಸುತ್ತಿದ್ದು, ಕರೆ, ಲೈವ್ ಚಾಟ್, ವೆಬ್ಎಕ್ಸ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬೆಂಬಲ ಒದಗಿಸಲಾಗುತ್ತಿದೆ.* ಕೊನೆಯ ಕ್ಷಣದ ಆತುರ ತಪ್ಪಿಸಲು ಸಾಧ್ಯವಾದಷ್ಟು ಬೇಗ ರಿಟರ್ನ್ ಸಲ್ಲಿಸಲು ಇಲಾಖೆ ಮನವಿ ಮಾಡಿದೆ.* ಈ ವರ್ಷದ ಆರಂಭದಲ್ಲಿ ITR ಫಾರ್ಮ್ಗಳಲ್ಲಿ ಮಾಡಲಾದ ರಚನಾತ್ಮಕ ಬದಲಾವಣೆಗಳ ಕಾರಣದಿಂದಾಗಿ ಅಂತಿಮ ದಿನಾಂಕವನ್ನು ಮೇ ತಿಂಗಳಲ್ಲೇ ವಿಸ್ತರಿಸಲಾಗಿತ್ತು. ವರ್ಷದಿಂದ ವರ್ಷಕ್ಕೆ ಐಟಿಆರ್ ಸಲ್ಲಿಕೆಯಲ್ಲಿ ನಿರಂತರ ಏರಿಕೆ ದಾಖಲಾಗುತ್ತಿದೆ.