* ಪ್ರಧಾನ ಮಂತ್ರಿ ಜನ್ಧನ್ ಯೋಜನೆಯಡಿಯಲ್ಲಿ ಖಾತೆಗಳ ಸಂಖ್ಯೆ 55 ಕೋಟಿ ದಾಟಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಈ ಯೋಜನೆ ಅಡಿಯಲ್ಲಿ ಮೊದಲು ಬ್ಯಾಂಕ್ ಸಂಪರ್ಕವಿಲ್ಲದವರು ಸಹ ಖಾತೆದಾರರಾಗಿದ್ದಾರೆ.* ಯೋಜನೆ 10 ವರ್ಷಗಳನ್ನು ಪೂರೈಸಿದ್ದು, ಎಲ್ಲ ಖಾತೆಗಳಿಗೆ ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿದೆ. ಬ್ಯಾಂಕುಗಳಿಗೆ ಈ ಪ್ರಕ್ರಿಯೆ ಸರಳಗೊಳಿಸುವಂತೆ ಸೂಚನೆ ನೀಡಲಾಗಿದೆ. ಜುಲೈ 1ರಿಂದ ಈ ಸಂಬಂಧ ಅಭಿಯಾನ ಆರಂಭವಾಗಿದೆ.* ಆರ್ಬಿಐ ಮಾಹಿತಿಯಂತೆ, ಜನ್ಧನ್ ಖಾತೆಗಳಲ್ಲಿ ಶೇ. 56ರಷ್ಟು ಮಹಿಳೆಯರದ್ದಾಗಿವೆ. ಮೇ 21ರ ವೇಳೆಗೆ ಈ ಖಾತೆಗಳಲ್ಲಿ ಠೇವಣಿಗಳ ಮೊತ್ತ 2.5 ಲಕ್ಷ ಕೋಟಿ ರೂ. ಮೀರಿದೆ.* ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಶೇ. 66.6ರಷ್ಟು ಖಾತೆಗಳು ತೆರೆಯಲಾಗಿದ್ದು, 29.56 ಕೋಟಿ ಮಹಿಳಾ ಖಾತೆದಾರರಿದ್ದಾರೆ.