* ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾದ ಕನನಾಸ್ಕಿಸ್ನಲ್ಲಿ ನಡೆಯುತ್ತಿರುವ 51ನೇ ‘ಜಿ7’ ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾಗೆ ಬಂದಿಳಿದಿದ್ದಾರೆ. ಇದು ಸತತ 6ನೇ ಬಾರಿಗೆ ಅವರು ಜಿ7 ಶೃಂಗದಲ್ಲಿ ಪಾಲ್ಗೊಳ್ಳುತ್ತಿರುವುದು.* ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಳಿಕ ಮೊದಲ ಬಾರಿಗೆ ಅವರು ಕೆನಡಾ ಭೇಟಿಯನ್ನೆತ್ತಿದ್ದಾರೆ. ಇದು 10 ವರ್ಷಗಳಲ್ಲಿ ಅವರ ಮೊದಲ ಕೆನಡಾ ಭೇಟಿ.* ಈ ಶೃಂಗದಲ್ಲಿ ಇಂಧನ ಭದ್ರತೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಕೃತಕಬುದ್ಧಿಮತ್ತೆ (AI) ಕುರಿತಂತೆ ಚರ್ಚೆಗಳು ನಡೆಯಲಿದ್ದು, ಜಾಗತಿಕ ಸವಾಲುಗಳ ಪರಿಹಾರೋಪಾಯಗಳ ಕುರಿತು ನಾಯಕರ ಅಭಿಪ್ರಾಯ ವಿನಿಮಯವಾಗಲಿದೆ.* ಜಿ7 ಸದಸ್ಯರು (ಅಮೆರಿಕ, ಜಪಾನ್, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಕೆನಡಾ, ಇಟಲಿ) ಜೊತೆಗೆ ಐಎಂಎಫ್, ವಿಶ್ವಬ್ಯಾಂಕ್ ಮತ್ತು ಯುಎನ್ ಪ್ರತಿನಿಧಿಗಳೂ ಶೃಂಗದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.* ಮೋದಿ ಅವರು ಸೈಪ್ರಸ್, ಕೆನಡಾ ಮತ್ತು ಕ್ರೊಯೇಷಿಯಾ ಪ್ರವಾಸ ಕೈಗೊಂಡಿದ್ದು, ಸೈಪ್ರಸ್ನಲ್ಲಿ ರಾಷ್ಟ್ರಪತಿ ನಿಕೋಸ್ ಅವರು ಮೋದಿಗೆ ರಾಷ್ಟ್ರದ ಉನ್ನತ ಗೌರವ ‘ಗ್ರ್ಯಾಂಡ್ ಕ್ರಾಸ್ ಆಫ್ ಮಕರಿಯೋಸ್–3’ ನೀಡಿ ಸನ್ಮಾನಿಸಿದರು.