* ಭಾರತವು ಒಡಿಶಾ ಕರಾವಳಿಯ ಚಂಡಿಪುರದಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಅಗ್ನಿ-5 ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಪರಮಾಣು ಸಾಮರ್ಥ್ಯದ ಕ್ಷಿಪಣಿಯಾಗಿದೆ.* ಅಗ್ನಿ-5 ಕ್ಷಿಪಣಿಯು 5,000 ಕಿ.ಮೀ. ವರೆಗೆ ಗುರಿಗಳನ್ನು ಭೇದಿಸಬಲ್ಲದು. ಒಂದು ಟನ್ಗಿಂತ ಹೆಚ್ಚು ತೂಕದ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿದೆ.* ಇದು ಸ್ವಯಂಚಾಲಿತ ವ್ಯವಸ್ಥೆ ಮತ್ತು ವಿವಿಧ ರೇಡಾರ್ ಹಾಗೂ ಸಂಪರ್ಕ ವ್ಯವಸ್ಥೆಗಳ ಮೂಲಕ ಮಾಹಿತಿ ಪಡೆಯುವ ತಾಂತ್ರಿಕತೆ ಹೊಂದಿದೆ.* ಡಿಆರ್ಡಿಓ ನೇತೃತ್ವದಲ್ಲಿ 2012ರಲ್ಲಿ ಮೊದಲ ಪರೀಕ್ಷಾರ್ಥ ಉಡಾವಣೆ ನಡೆದಿತ್ತು. ಇದೀಗ ಪರೀಕ್ಷೆಯಲ್ಲಿ ಎಲ್ಲಾ ಕಾರ್ಯಾಚರಣೆ ಮತ್ತು ತಾಂತ್ರಿಕ ನಿಯತಾಂಕಗಳನ್ನು ಯಶಸ್ವಿಯಾಗಿ ಮೌಲ್ಯೀಕರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ.* ಅಗ್ನಿ ಸರಣಿಯಲ್ಲಿ ಅತ್ಯಂತ ಮುಂದುವರಿದ ಕ್ಷಿಪಣಿಯಾದ ಅಗ್ನಿ-5, ಭಾರತದ ಭೂಆಧಾರಿತ ಪರಮಾಣು ನಿರೋಧಕದ ಬೆನ್ನೆಲುಬಾಗಿದೆ.* ಇದು 1.5 ಟನ್ಗಳಷ್ಟು ತೂಕದ ಪರಮಾಣು ಸಿಡಿತಲೆ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಹಗುರ ಸಂಯೋಜಿತ ವಸ್ತುಗಳಿಂದ ನಿರ್ಮಾಣವಾಗಿರುವುದರಿಂದ ಹೆಚ್ಚು ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ.