* ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ಕರ್ನಾಟಕಕ್ಕೆ ₹37,647 ಕೋಟಿ ವಿದೇಶಿ ನೇರ ಹೂಡಿಕೆ (FDI) ಹರಿದು ಬಂದಿದೆ. ಕಳೆದ 5 ವರ್ಷದಲ್ಲಿ ಒಟ್ಟು ₹4,27,130 ಕೋಟಿ ಹೂಡಿಕೆ ಆಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.* ಕರ್ನಾಟಕ ಕಳೆದ ಐದು ವರ್ಷಗಳಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ನಂತರದ ಸ್ಥಾನ ಪಡೆದಿದೆ.* ಕೇಂದ್ರ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ವರದಿ ಪ್ರಕಾರ, ಈ ಹಣಕಾಸು ವರ್ಷದ ಪ್ರಾರಂಭಿಕ 9 ತಿಂಗಳಲ್ಲಿ ಭಾರತಕ್ಕೆ ₹3.45 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ.* ಕೊನೆಯ 9 ತಿಂಗಳಲ್ಲಿ ಮಹಾರಾಷ್ಟ್ರಕ್ಕೆ ₹1.39 ಲಕ್ಷ ಕೋಟಿ, ಗುಜರಾತ್ಗೆ ₹47,000 ಕೋಟಿ, ಮತ್ತು ಕರ್ನಾಟಕಕ್ಕೆ ₹37,647 ಕೋಟಿ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ.