* ಭಾರತವು ಈ ವರ್ಷ ಪೆಟ್ರೋಲ್ನಲ್ಲಿ ಶೇ.20 ಎಥೆನಾಲ್ ಮಿಶ್ರಣವನ್ನು ಸಾಧಿಸಿದ್ದು, ನಿಗದಿತ 2030 ಗುರಿಗಿಂತ ಐದು ವರ್ಷ ಮುಂಚಿತವಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.* 2014ರಲ್ಲಿ ಎಥೆನಾಲ್ ಮಿಶ್ರಣ ಶೇ.1.5ರಷ್ಟಿತ್ತು. ಅದು 2025ರೊಳಗೆ ಶೇ.20ಕ್ಕೆ ಏರಿದಿದೆ, ಇದು 13 ಪಟ್ಟು ಬೆಳವಣಿಗೆಯಾಗಿದೆ. ಈ ಬದಲಾವಣೆ ಇಂಧನ ಸುರಕ್ಷತೆಗೆ ಹಾಗೂ ಪರಿಸರ ರಕ್ಷಣೆಗೆ ಸಹಕಾರಿಯಾಗಿದೆಯೆಂದು ಅವರು ಹೇಳಿದರು.* 2014ರಲ್ಲಿ 38 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆಯು 2025ರ ಜೂನ್ ವೇಳೆಗೆ 661.1 ಕೋಟಿ ಲೀಟರ್ಗಳಿಗೆ ಏರಿದಿದೆ. ಇದರ ಪರಿಣಾಮವಾಗಿ ₹1.36 ಲಕ್ಷ ಕೋಟಿ ವಿದೇಶಿ ವಿನಿಮಯ ಉಳಿದಿದ್ದು, ಇಂಗಾಲದ ಡೈಆಕ್ಸೈಡ್ ಉತ್ಸರ್ಜನೆಯೂ 698 ಲಕ್ಷ ಟನ್ಗಳಷ್ಟು ಕಡಿಮೆಯಾಗಿದೆ.* ಎಥೆನಾಲ್ ಮುಖ್ಯವಾಗಿ ಕಬ್ಬು ಬೆಳೆಗಳಿಂದ ಪಡೆಯಲಾಗುತ್ತದೆ. ಇದರಿಂದ ಕೃಷಿಗೆ ಸಹಕಾರ ಸಿಗುತ್ತಿದೆ. ಇತ್ತೀಚೆಗಷ್ಟೆ, ಕೇಂದ್ರ ಸರ್ಕಾರ ಎಥೆನಾಲ್ ಬೆಲೆ ಹೆಚ್ಚಳಕ್ಕೂ ಅನುಮೋದನೆ ನೀಡಿದೆ.