Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ವಸಾಯಿಯ 475 ವರ್ಷ ಹಳೆಯ ಚರ್ಚ್ಗೆ ಯುನೆಸ್ಕೋ (UNESCO) ಗೌರವ: ಸಾಂಸ್ಕೃತಿಕ ಪರಂಪರೆ ಸಂರಕ್ಷಣೆಯಲ್ಲಿ ಜಾಗತಿಕ ಮನ್ನಣೆ!
Authored by:
Akshata Halli
Date:
23 ಫೆಬ್ರುವರಿ 2026
➤
ಮಹಾರಾಷ್ಟ್ರದ ಸಾಂಸ್ಕೃತಿಕ ಪರಂಪರೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿರುವ 475 ವರ್ಷಗಳಷ್ಟು ಹಳೆಯದಾದ
'ಅವರ್ ಲೇಡಿ ಆಫ್ ಗ್ರೇಸ್ ಕೆಥೆಡ್ರಲ್' (Our Lady of Grace Cathedral)
ಚರ್ಚ್ಗೆ 2025ನೇ ಸಾಲಿನ
UNESCO ಏಷ್ಯಾ-ಪೆಸಿಫಿಕ್ 'ಅವಾರ್ಡ್ ಆಫ್ ಮೆರಿಟ್' (Award of Merit)
ಲಭಿಸಿದೆ. ವಿಶೇಷವೆಂದರೆ, ಈ ಐತಿಹಾಸಿಕ ಕಟ್ಟಡದ ಜೀರ್ಣೋದ್ಧಾರವು ಸಂಪೂರ್ಣವಾಗಿ ಸಮುದಾಯದ ಧನಸಹಾಯದಿಂದ ನಡೆದಿದೆ.
➤
ಯುನೆಸ್ಕೋ ಪ್ರಶಸ್ತಿ:
ಬ್ಯಾಂಕಾಕ್ನಲ್ಲಿ ನಡೆದ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಗಿದ್ದು, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ನೀಡಲಾಗುವ ಪ್ರತಿಷ್ಠಿತ ಯುನೆಸ್ಕೋ ಏಷ್ಯಾ-ಪೆಸಿಫಿಕ್ ಪ್ರಶಸ್ತಿಗಳ 25ನೇ ವರ್ಷದ (ಬೆಳ್ಳಿ ಹಬ್ಬ) ಸಂಭ್ರಮದಲ್ಲಿ ಈ ಗೌರವ ಸಂದಿದೆ. ಈ ಬಾರಿ 16 ದೇಶಗಳ ಒಟ್ಟು 90 ಪ್ರವೇಶಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು.
➤
ಕಟ್ಟಡದ ಐತಿಹಾಸಿಕ ಹಿನ್ನೆಲೆ:
ಪೋರ್ಚುಗೀಸ್ ಕಾಲದ ಈ 16ನೇ ಶತಮಾನದ ಭವ್ಯ ಚರ್ಚ್, ಸಿಮೆಂಟ್ ಬಳಸದೆ ಕೇವಲ ಕಲ್ಲು-ಮಣ್ಣಿನಿಂದ ನಿರ್ಮಿತವಾದ ವಿಶಿಷ್ಟ ವಾಸ್ತುಶಿಲ್ಪವಾಗಿದ್ದು, ತನ್ನ ಕೆತ್ತನೆಯ ಬಲಿಪೀಠಗಳು ಮತ್ತು ಸಾಂಪ್ರದಾಯಿಕ ಮಂಗಳೂರು ಹೆಂಚಿನ ಮೇಲ್ಛಾವಣಿಯ ಮೂಲಕ ಐತಿಹಾಸಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.
➤
ಸಮುದಾಯದ ಶಕ್ತಿ:
ಯಾವುದೇ ಸರ್ಕಾರಿ ಅನುದಾನವಿಲ್ಲದೆ, ಸ್ಥಳೀಯ ಪ್ಯಾರಿಷ್ ಸಮುದಾಯದ ಜನರು ಒಗ್ಗೂಡಿ ಸುಮಾರು
₹4.5 ಕೋಟಿ
ಹಣವನ್ನು ಕ್ರೋಢೀಕರಿಸಿ ಈ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.ಸಂರಕ್ಷಣಾ ವಾಸ್ತುಶಿಲ್ಪಿ (Conservation Architect) ಐನ್ಸ್ಲೇ ಲೂಯಿಸ್ ಅವರ ನೇತೃತ್ವದಲ್ಲಿ 2023 ರಿಂದ 2024ರ ಅವಧಿಯಲ್ಲಿ ಈ ಕೆಲಸ ನಡೆದಿದೆ. ಸೋರುತ್ತಿದ್ದ ಮೇಲ್ಛಾವಣಿಯ ದುರಸ್ತಿ, ಗಂಟೆ ಗೋಪುರದ ಬಲವರ್ಧನೆ ಮತ್ತು ಹಳೆಯ ಕಾಲದ ಕಲಾತ್ಮಕ ಕೆತ್ತನೆಗಳನ್ನು ಮೂಲ ರೂಪಕ್ಕೆ ತರುವುದು.
➤
ಯುನೆಸ್ಕೋ ತನ್ನ ಉಲ್ಲೇಖದಲ್ಲಿ ಈ ಕೆಳಗಿನ ಅಂಶಗಳನ್ನು ಪ್ರಮುಖವಾಗಿ ಗುರುತಿಸಿದೆ:
- ಸಾಂಪ್ರದಾಯಿಕ ಕುಶಲಕರ್ಮಿಗಳ ಕೌಶಲ್ಯವನ್ನು ಬಳಸಿಕೊಂಡಿರುವುದು.
- ಕಡಿಮೆ ಬಜೆಟ್ನಲ್ಲಿ ಸುಸ್ಥಿರ ತಂತ್ರಜ್ಞಾನದ ಬಳಕೆ.
- ಸಮುದಾಯದ ನೇರ ಪಾಲ್ಗೊಳ್ಳುವಿಕೆ ಮತ್ತು ಮಾಲೀಕತ್ವದ ಮನೋಭಾವ.
- ಕಟ್ಟಡದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನಡೆಸಿದ ದುರಸ್ತಿ ಕಾರ್ಯ.
➤
ಜಾಗತಿಕ ವಿಜೇತರು:
ಈ ಬಾರಿಯ ಯುನೆಸ್ಕೋ ಪ್ರಶಸ್ತಿಗಳಲ್ಲಿ ಅತ್ಯುನ್ನತ 'ಅವಾರ್ಡ್ ಆಫ್ ಡಿಸ್ಟಿಂಕ್ಷನ್' (Award of Distinction) ಅನ್ನು ಜಪಾನ್ನ 'ಇವಾಮಿ ಗಿನ್ಜಾನ್ ಲೈಬ್ರರಿ' ಮತ್ತು ಚೀನಾದ 'ಸಿಹಾಂಗ್ ವೇರ್ ಹೌಸ್' ಯೋಜನೆಗಳು ಪಡೆದುಕೊಂಡಿವೆ.
Take Quiz
Loading...