* ಸರ್ಕಾರವು ಒಡಿಶಾ, ಪಂಜಾಬ್ ಮತ್ತು ಆಂಧ್ರಪ್ರದೇಶಗಳಲ್ಲಿ 4 ಹೊಸ ಸೆಮಿಕಂಡಕ್ಟರ್ ಯೋಜನೆಗಳಿಗೆ 4,594 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ನೀಡಿದೆ. ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.* ಕಳೆದ 11 ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ 6 ಪಟ್ಟು, ರಫ್ತು 8 ಪಟ್ಟು, ಮತ್ತು ಮೊಬೈಲ್ ಉತ್ಪಾದನಾ ಘಟಕಗಳು 2ರಿಂದ 300ಕ್ಕೆ ಹೆಚ್ಚಾಗಿವೆ.* ಮೊಬೈಲ್ ಫೋನ್ ರಫ್ತು 2 ಲಕ್ಷ ಕೋಟಿ ರೂ. ತಲುಪಿದೆ. ಮುಂದಿನ ತಿಂಗಳು ನವದೆಹಲಿಯಲ್ಲಿ 'ಸೆಮಿಕಾನ್ ಇಂಡಿಯಾ 2025' ನಡೆಯಲಿದ್ದು, ಮಲೇಷ್ಯಾ, ಜಪಾನ್, ಸಿಂಗಾಪುರ ಮತ್ತು ದಕ್ಷಿಣ ಕೊರಿಯಾ ಪಾಲ್ಗೊಳ್ಳಲಿವೆ.* ಲಕ್ನೋ ಮೆಟ್ರೋ ಹಂತ 1B ಯೋಜನೆಗೆ 5,801 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ದೊರೆತಿದೆ. ಚಾರ್ಬಾಗ್ನಿಂದ ವಸಂತ್ ಕುಂಜ್ ವರೆಗೆ 12 ನಿಲ್ದಾಣಗಳು ನಿರ್ಮಿಸಲಿದ್ದು, 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.* ಅರುಣಾಚಲ ಪ್ರದೇಶದ ಶಿ ಯೋಮಿ ಜಿಲ್ಲೆಯಲ್ಲಿ 700 ಮೆಗಾವ್ಯಾಟ್ ಸಾಮರ್ಥ್ಯದ ಟಾಟೊ-II ಜಲವಿದ್ಯುತ್ ಯೋಜನೆಗೆ ಅನುಮೋದನೆ ದೊರೆತಿದೆ.* 6 ವರ್ಷಗಳಲ್ಲಿ ಪೂರ್ಣಗೊಳ್ಳುವ ಈ ಯೋಜನೆ, ಸ್ಥಿರ ವಿದ್ಯುತ್ ಪೂರೈಕೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ನೆರವಾಗಲಿದೆ. ಭಾರತದ ಪಳೆಯುಳಿಕೆ ಇಂಧನ ಸಾಮರ್ಥ್ಯವು ಈಗ ಶೇಕಡಾ 50 ಕ್ಕಿಂತ ಹೆಚ್ಚು ತಲುಪಿದೆ.