* ಮರಾಠಾ ಮಿಲಿಟರಿ ಭೂದೃಶ್ಯಗಳು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಭಾರತದ 44ನೇ ತಾಣವಾಗಿ ಸೇರ್ಪಡೆಯಾಗಿದೆ.* ಮರಾಠಾ ಸಾಮ್ರಾಜ್ಯದ ಶಕ್ತಿಶಾಲಿ ಕೋಟೆ ನಿರ್ಮಾಣ ಶೈಲಿ ಮತ್ತು ಮಿಲಿಟರಿ ತಂತ್ರಗಳನ್ನು ಪ್ರತಿನಿಧಿಸುವ ಈ ಭೂದೃಶ್ಯಗಳನ್ನು 17ನೇ ಶತಮಾನದಿಂದ 19ನೇ ಶತಮಾನವರೆಗೆ ಅಭಿವೃದ್ಧಿಪಡಿಸಲಾಯಿತು.* ಈ ಪಟ್ಟಿಯಲ್ಲಿ ಸೇರಿರುವ 12 ಕೋಟೆಗಳಲ್ಲಿ 11 ಮಹಾರಾಷ್ಟ್ರದಲ್ಲಿ ಮತ್ತು 1 ತಮಿಳುನಾಡಿನಲ್ಲಿ ಇದೆ. ಈ ಕೋಟೆಗಳು ಪರ್ವತ, ಸಮುದ್ರ ತೀರ ಮತ್ತು ಕಠಿಣ ಭೂಭಾಗಗಳಲ್ಲಿ ಸ್ಥಾಪನೆಯಾಗಿದ್ದು, ಮರಾಠಾ ಆಳ್ವಿಕೆಯ ತಂತ್ರಜ್ಞಾನದ ಪ್ರಾವೀಣ್ಯತೆಯನ್ನು ತೋರಿಸುತ್ತವೆ.* ಪ್ಯಾರಿಸ್ನಲ್ಲಿ ನಡೆಯುತ್ತಿರುವ ಯುನೆಸ್ಕೋ ವಿಶ್ವ ಪರಂಪರೆ ಸಮಿತಿಯ 47ನೇ ಅಧಿವೇಶನದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.* ಪ್ರಧಾನಿ ನರೇಂದ್ರ ಮೋದಿ, ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.* ಈ ಯೋಜನೆಗೆ ಕೇಂದ್ರ ಸರ್ಕಾರದ, ಭಾರತೀಯ ಪುರಾತತ್ವ ಸಮೀಕ್ಷೆ (ASI), ಮತ್ತು ಮಹಾರಾಷ್ಟ್ರ ಸರ್ಕಾರದ ಹಲವಾರು ಅಧಿಕಾರಿಗಳ ಸಹಕಾರ ಇದ್ದದ್ದರಿಂದ ಯಶಸ್ಸು ಸಾಧ್ಯವಾಯಿತು. ಜನವರಿ 2024ರಲ್ಲಿ ಸಲ್ಲಿಸಲಾದ ಪ್ರಸ್ತಾವನೆಯ ನಂತರ 18 ತಿಂಗಳ ಪರಿಶೀಲನೆ ಪ್ರಕ್ರಿಯೆಯ ಬಳಿಕ ಇದನ್ನು ಮಾನ್ಯತೆ ನೀಡಲಾಗಿದೆ.* ಈ ಸೇರ್ಪಡೆ ಬಳಿಕ ಭಾರತ ವಿಶ್ವ ಪರಂಪರೆ ತಾಣಗಳ ಸಂಖ್ಯೆಯಲ್ಲಿ ಜಾಗತಿಕವಾಗಿ 6ನೇ ಸ್ಥಾನದಲ್ಲಿದೆ. ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿ ಇನ್ನೂ 62 ಭಾರತೀಯ ತಾಣಗಳಿವೆ.