* ಭಾರತವು 2030ರ ವೇಳೆಗೆ ತನ್ನ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು 300 ಮಿಲಿಯನ್ ಟನ್ಗಳಿಗೆ ವೃದ್ಧಿಸುವ ಗುರಿಯತ್ತ ಸಾಗುತ್ತಿದೆ.* 2024-25ರ ಹಣಕಾಸು ವರ್ಷದ ಏಪ್ರಿಲ್ ನಿಂದ ಡಿಸೆಂಬರ್ ಅವಧಿಯಲ್ಲಿ ದೇಶವು 110.99 ಮಿಲಿಯನ್ ಟನ್ ಕಚ್ಚಾ ಉಕ್ಕು ಮತ್ತು 106.86 ಮಿಲಿಯನ್ ಟನ್ ಸಿದ್ದ ಉಕ್ಕನ್ನು ಉತ್ಪಾದಿಸಿದೆ.* ಉಕ್ಕು ವಲಯದಲ್ಲಿ ಭಾರತ ಕೈಗೊಂಡಿರುವ ಮಹತ್ವಾಕಾಂಕ್ಷಿ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಜ್ಞಾನ ಹಂಚಿಕೆ ಹಾಗೂ ಅಂತಾರಾಷ್ಟ್ರೀಯ ಸಹಯೋಗಕ್ಕೆ ಹೊಸ ಅವಕಾಶಗಳನ್ನು ಕಲ್ಪಿಸಲು ಭಾರತವು ಉಕ್ಕಿನ ವ್ಯಾಪಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಮುಂದಾಗಿದೆ.* ಕೇಂದ್ರ ಸರಕಾರದ ನೀತಿ ಸುಧಾರಣೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಪ್ರಯತ್ನಗಳನ್ನು ಪ್ರದರ್ಶಿಸುವ ಉದ್ದೇಶದಿಂದ ‘ಇಂಡಿಯಾ ಸ್ಟೀಲ್ 2025’ ಕಾರ್ಯಕ್ರಮ ಮುಂಬಯಿಯಲ್ಲಿ ಮುಂದಿನ ವಾರ ನಡೆಯಲಿದೆ.* ಏಪ್ರಿಲ್ 24ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಜಾಗತಿಕ ಉಕ್ಕು ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡುವರು.* ಈ ಸಮಾರಂಭದಲ್ಲಿ ರಷ್ಯಾದ ಕೈಗಾರಿಕೆ ಮತ್ತು ವ್ಯಾಪಾರ ಉಪಸಚಿವರು, ಆಸ್ಟ್ರೇಲಿಯಾ, ಮೊಜಾಂಬಿಕ್ ಮತ್ತು ಮಂಗೋಲಿಯಾದ ರಾಯಭಾರಿಗಳು ಸೇರಿದಂತೆ ಜಾಗತಿಕ ಕೈಗಾರಿಕಾ ನಾಯಕರು ಮತ್ತು ಹಿರಿಯ ವಿದೇಶಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದು ಜಗತ್ತಿನಾದ್ಯಾಂತ ಅತಿದೊಡ್ಡ ಉಕ್ಕು ಸಮಾವೇಶಗಳಲ್ಲಿ ಒಂದಾಗಲಿದೆ.