* ದೇಶದಲ್ಲಿ 29,500ಕ್ಕೂ ಹೆಚ್ಚು ಡ್ರೋನ್ಗಳು ನೋಂದಣಿಯಾಗಿವೆ. ಈ ಪೈಕಿ ದೆಹಲಿಯಲ್ಲಿ 4,882 ನೋಂದಣಿಯಾಗಿದ್ದರೆ, ಕರ್ನಾಟಕದಲ್ಲಿ 2,516 ಡ್ರೋನ್ಗಳನ್ನು ನೋಂದಾಯಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.* ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಜನವರಿ 29 ರವರೆಗೆ ಪರಿಷ್ಕರಿಸಿದ ಮಾಹಿತಿಯಂತೆ 29,501 ನೋಂದಾಯಿತ ಡ್ರೋನ್ಗಳಿವೆ.* ನಾಗರಿಕ ವಿಮಾನಯಾನ ಸಚಿವಾಲಯವು ಈ ವಾರ ರಾಜ್ಯಸಭೆಯಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ ಹೆಚ್ಚಿನ ಸಂಖ್ಯೆಯ ನೋಂದಾಯಿತ ಡ್ರೋನ್ಗಳನ್ನು ಹೊಂದಿರುವ ಇತರ ರಾಜ್ಯಗಳಲ್ಲಿ ಹರಿಯಾಣ (3,689), ಕರ್ನಾಟಕ (2,516), ತೆಲಂಗಾಣ (1,928), ಗುಜರಾತ್ (1,338) ಮತ್ತು ಕೇರಳ (1,318) ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 4,588 ಮತ್ತು 4,132 ಡ್ರೋನ್ ಗಳು ಸೇರಿವೆ.* ನಿಯಂತ್ರಕವು ವಿವಿಧ ಮಾನವರಹಿತ ವಿಮಾನ ವ್ಯವಸ್ಥೆ (UAS) ಮಾದರಿಗಳು ಅಥವಾ ಡ್ರೋನ್ಗಳಿಗೆ 96 ಪ್ರಕಾರದ ಪ್ರಮಾಣಪತ್ರಗಳನ್ನು ನೀಡಿದೆ ಮತ್ತು ಅವುಗಳಲ್ಲಿ 65 ಮಾದರಿಗಳು ಕೃಷಿ ಉದ್ದೇಶಕ್ಕಾಗಿವೆ.* ಪ್ರತಿ ನೋಂದಾಯಿತ ಡ್ರೋನ್ಗೆ DGCA ನಿರ್ವಹಿಸುವ ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ನಿಂದ ವಿಶಿಷ್ಟ ಗುರುತಿನ ಸಂಖ್ಯೆ (UIN) ನೀಡಲಾಗುತ್ತದೆ. DGCA-ಅಧಿಕೃತ ರಿಮೋಟ್ ಪೈಲಟ್ ತರಬೇತಿ ಸಂಸ್ಥೆಗಳು (RPTOಗಳು) 22,466 ರಿಮೋಟ್ ಪೈಲಟ್ ಪ್ರಮಾಣಪತ್ರಗಳನ್ನು (RPCs) ನೀಡಿವೆ.* ಡ್ರೋನ್ ಹಾರಾಟಕ್ಕೆ ಹಸಿರು, ಹಳದಿ ಮತ್ತು ಕೆಂಪು ವಲಯವನ್ನು ಗುರುತಿಸಲಾಗಿದೆ. ಹಸಿರು ವಲಯದಲ್ಲಿ ಹಾರಾಟಕ್ಕೆ ಪೂರ್ವಾನುಮತಿ ಬೇಕಿಲ್ಲ. ಹಳದಿ ವಲಯಕ್ಕೆ ವಾಯು ಸಂಚಾರ ನಿಯಂತ್ರಣ ಘಟಕ (ಎಟಿಸಿ) ಮತ್ತು ಕೆಂಪು ವಲಯಕ್ಕೆ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯವಾಗಿದೆ.