Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
28ನೇ ಕಾಮನ್ವೆಲ್ತ್ ಸ್ಪೀಕರ್ಗಳ ಸಮ್ಮೇಳನ (CSPOC 2026): ಸಂವಿಧಾನ ಸದನದಲ್ಲಿ ಪ್ರಧಾನಿ ಮೋದಿ ಚಾಲನೆ
15 ಜನವರಿ 2026
➤
ಭಾರತವು 28ನೇ ಕಾಮನ್ವೆಲ್ತ್ ಸಂಸತ್ತಿನ ಸ್ಪೀಕರ್ಗಳು ಮತ್ತು ಅಧ್ಯಕ್ಷೀಯ ಅಧಿಕಾರಿಗಳ ಸಮ್ಮೇಳನ (CSPOC 2026) ಅನ್ನು 2026ರ ಜನವರಿ 14ರಿಂದ 16ರವರೆಗೆ ನವದೆಹಲಿಯಲ್ಲಿ ಆಯೋಜಿಸಿದೆ.
ಈ ಕಾರ್ಯಕ್ರಮವನ್ನು ಜನವರಿ 15ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಸಂಸತ್ ಭವನ ಸಂಕೀರ್ಣದ ಐತಿಹಾಸಿಕ ಸಂವಿಧಾನ ಸದನ (Samvidhan Sadan) ದಲ್ಲಿ ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ವಹಿಸಿದ್ದರು.
➤ ಈ ಬಾರಿಯ ಸಮ್ಮೇಳನದ ಕೇಂದ್ರ ಬಿಂದು(
THEME
)
"ಸಂಸದೀಯ ಪ್ರಜಾಪ್ರಭುತ್ವದ ಪರಿಣಾಮಕಾರಿ ವಿತರಣೆ" (Effective Delivery of Parliamentary Democracy)
ಎಂಬುದಾಗಿದೆ.
➤
ಕಾಮನ್ವೆಲ್ತ್ ದೇಶಗಳ ಸಂಸದೀಯ ಸಂಸ್ಥೆಗಳ ನಡುವೆ ಜ್ಞಾನದ ಹಂಚಿಕೆ, ಪ್ರಜಾಪ್ರಭುತ್ವದ ಮೌಲ್ಯಗಳ ಬಲವರ್ಧನೆ ಮತ್ತು ಉತ್ತಮ ಆಡಳಿತದ ಬಗ್ಗೆ ಚರ್ಚಿಸುವುದು ಈ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ಭಾರತವು ಈ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಇದು
ನಾಲ್ಕನೇ ಬಾರಿ
(ಹಿಂದೆ 1971, 1986 ಮತ್ತು 2010ರಲ್ಲಿ ಆಯೋಜಿಸಲಾಗಿತ್ತು).
➤ ಪ್ರಮುಖ ಚರ್ಚಾ ವಿಷಯಗಳು:-
ಮೂರು ದಿನಗಳ ಈ ಸಮಾವೇಶದಲ್ಲಿ ಸಂಸದೀಯ ವ್ಯವಸ್ಥೆಯ ಆಧುನೀಕರಣಕ್ಕೆ ಸಂಬಂಧಿಸಿದಂತೆ ಕೆಳಗಿನ ವಿಷಯಗಳ ಮೇಲೆ ಬೆಳಕು ಚೆಲ್ಲಲಾಯಿತು:
=> ಕೃತಕ ಬುದ್ಧಿಮತ್ತೆ (AI):
ಸಂಸತ್ತಿನ ಕಾರ್ಯಕಲಾಪಗಳಲ್ಲಿ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮತ್ತು ಭಾಷಾ ಅನುವಾದಕ್ಕಾಗಿ ಅದರ ಬಳಕೆ.
=> ಸಾಮಾಜಿಕ ಮಾಧ್ಯಮ:
ಜನಪ್ರತಿನಿಧಿಗಳ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವ ಮತ್ತು ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸುವ ರೀತಿ.
=> ಸಾರ್ವಜನಿಕ ಸಹಭಾಗಿತ್ವ:
ಚುನಾವಣೆಗಳ ಹೊರತಾಗಿ ನಾಗರಿಕರು ಸಂಸದೀಯ ಪ್ರಕ್ರಿಯೆಯಲ್ಲಿ ಹೇಗೆ ಭಾಗವಹಿಸಬಹುದು ಎಂಬ ನವೀನ ಆಲೋಚನೆಗಳು.
=> ಸಂಸದರ ಕ್ಷೇಮಾಭಿವೃದ್ಧಿ:
ಸದಸ್ಯರ ಭದ್ರತೆ, ಆರೋಗ್ಯ ಮತ್ತು ಒಟ್ಟಾರೆ ಕಲ್ಯಾಣಕ್ಕೆ ಸಂಬಂಧಿಸಿದ ವಿಚಾರಗಳು.
➤ ಪ್ರಧಾನಿಯವರ ಭಾಷಣದ ಹೂರಣ:
ಭಾರತವನ್ನು 'Mother of Democracy' ಎಂದು ಕರೆದ ಪ್ರಧಾನಿ, ವೇದಗಳ ಕಾಲದ ಚರ್ಚಾ ಪರಂಪರೆಯನ್ನು ನೆನಪಿಸಿದರು.ಪ್ರಜಾಪ್ರಭುತ್ವದ ಯಶಸ್ಸು ಎಂದರೆ ಸರಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದು (Last-mile delivery). 2024ರ ಚುನಾವಣೆಯಲ್ಲಿ ಮಹಿಳೆಯರ ಭವ್ಯ ಭಾಗವಹಿಸುವಿಕೆ ಮತ್ತು ಭಾರತದ ಸ್ಥಳೀಯ ಸಂಸ್ಥೆಗಳಲ್ಲಿರುವ 1.5 ಮಿಲಿಯನ್ ಮಹಿಳಾ ಪ್ರತಿನಿಧಿಗಳ ದಾಖಲೆಯನ್ನು ಉಲ್ಲೇಖಿಸಿದರು.ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ದನಿಯಾಗಿ ಕೆಲಸ ಮಾಡುತ್ತಿದೆ ಮತ್ತು ತನ್ನ ಮುಕ್ತ ತಂತ್ರಜ್ಞಾನ ವೇದಿಕೆಗಳನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಿದೆ ಎಂದು ತಿಳಿಸಿದರು.
➤ ಜವಾಬ್ದಾರಿಯ ಹಸ್ತಾಂತರ:
ಸಮ್ಮೇಳನದ ಸಮಾರೋಪದ ನಂತರ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು CSPOC ಅಧ್ಯಕ್ಷತೆಯ ಜವಾಬ್ದಾರಿಯನ್ನು ಬ್ರಿಟನ್ನ ಹೌಸ್ ಆಫ್ ಕಾಮನ್ಸ್ನ ಸ್ಪೀಕರ್
ಲಿಂಡ್ಸೆ ಹೋಯ್ಲ್ (Lindsay Hoyle)
ಅವರಿಗೆ ಹಸ್ತಾಂತರಿಸಲಿದ್ದಾರೆ.
Take Quiz
Loading...