* ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಸೇರಿದಂತೆ ನಾಲ್ವರು ಇಂದು(ಮಾರ್ಚ್ 19) ಮುಂಜಾನೆ 3.37ಕ್ಕೆ ಅಮೆರಿಕದ ಫ್ಲೋರಿಡಾ ಕರಾವಳಿಗೆ ಸುರಕ್ಷಿತವಾಗಿ ಬಂದಿಳಿದರು.* ಕಳೆದ ವರ್ಷ ಜೂನ್ 5ರಂದು ಬೋಯಿಂಗ್ನ ಸ್ಟಾರ್ಲಿಂಕ್ ಗಗನನೌಕೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್ಎಸ್) ತೆರಳಿದ್ದ ಕ್ರೂ–9 ಮಿಷನ್ನ ತಾಂತ್ರಿಕ ದೋಷದಿಂದ ಸುನಿತಾ ಮತ್ತು ಬುಚ್ 9 ತಿಂಗಳಿಗೂ ಹೆಚ್ಚು ಕಾಲ ಐಎಸ್ಎಸ್ನಲ್ಲಿ ಉಳಿಯಬೇಕಾಯಿತು.* ನಾಸಾ ಮತ್ತು ಸ್ಪೇಸ್ಎಕ್ಸ್ನ ಕ್ರೂ–10 ಮಿಷನ್ ‘ಡ್ರ್ಯಾಗನ್’ ಗಗನನೌಕೆ ಐಎಸ್ಎಸ್ಗೆ ಕಳುಹಿಸಲಾದ ಸುನಿತಾ ಮತ್ತು ಬುಚ್ ಅವರನ್ನು ಭೂಮಿಗೆ ಯಶಸ್ವಿಯಾಗಿ ಮರಳಿ ಕರೆತಂದಿದೆ.* ನಾಲ್ವರು ಗಗನಯಾತ್ರಿಗಳಾದ ನಿಕ್ ಹೇಗ್, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ಅಲೆಕ್ಸಾಂಡರ್ ಗೊರ್ಬುನೊವ್ ಅವರನ್ನು ಸುರಕ್ಷಿತವಾಗಿ ನೌಕೆಯಿಂದ ಇಳಿಸಲಾಗಿದೆ. ಆರೋಗ್ಯ ತಪಾಸಣೆ ಸೇರಿದಂತೆ ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ನಾಸಾ ತಿಳಿಸಿದೆ.* ಸುನಿತಾ ವಿಲಿಯಮ್ಸ್, ಬುಚ್ ವಿಲ್ಲೋರ್, ರಷ್ಯಾದ ಅಲೆಕ್ಸಾಂಡರ್ ಗೋರ್ಬುನೋವ್ ಮತ್ತು ಅಮೆರಿಕದ ನಿಕ್ ಹೇಗ್ ಅವರನ್ನು ಹೊತ್ತ ಸ್ಟೇಸ್ಎಕ್ಸ್ನ ಕ್ಯೂ ಡ್ರಾಗನ್ ನೌಕೆ ಬಾಹ್ಯಾಕಾಶ ಕೇಂದ್ರದಿಂದ ಬೇರ್ಪಟ್ಟು ಬರೋಬ್ಬರಿ 17 ಗಂಟೆಗಳ ಪ್ರಯಾಣದ ಬಳಿಕ ಗಗನಯಾತ್ರಿಗಳು ಭೂಮಿಗೆ ಬಂದಿಳಿದಿದ್ದಾರೆ.* ಶ್ವೇತಭವನವು ಗಗನಯಾತ್ರಿಗಳ ಸುರಕ್ಷಿತ ವಾಪಸಾತಿಗಾಗಿ ಅಧ್ಯಕ್ಷ ಟ್ರಂಪ್ ನೀಡಿದ ಭರವಸೆ ನೆರವೇರಿದುದಾಗಿ ಹೇಳಿದ್ದು, ಸ್ಪೇಸ್ಎಕ್ಸ್, ನಾಸಾ ಮತ್ತು ಎಲಾನ್ ಮಸ್ಕ್ಗೆ ಕೃತಜ್ಞತೆ ಸಲ್ಲಿಸಿದೆ.* 9 ತಿಂಗಳ ಬಾಹ್ಯಾಕಾಶ ವಾಸದ ಬಳಿಕ, ಗಗನಯಾತ್ರಿಗಳು ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳುವಾಗ ತಲೆತಿರುಗುವಿಕೆ, ವಾಕರಿಕೆ ಮತ್ತು ನಡಿಗೆಯಲ್ಲಿ ಅಡಚಣೆ ಅನುಭವಿಸುತ್ತಾರೆ ಎಂದು ವರದಿ ತಿಳಿಸಿದೆ.* ಗಗನಯಾತ್ರಿಗಳು ಭುವಿಗೆ ಮರಳಿದಾಗ ನಡೆಯಲು ತೊಂದರೆ, ದೃಷ್ಟಿ ದೋಷ, ತಲೆತಿರುಗುವಿಕೆ ಹಾಗೂ ಮಗುವಿನಂತೆ ಹೆಜ್ಜೆ ಇಡುವ ಸ್ಥಿತಿಯನ್ನು ಎದುರಿಸುತ್ತಾರೆ. ಬಾಹ್ಯಾಕಾಶದಲ್ಲಿ ಹೆಚ್ಚು ಕಾಲ ಕಳೆದರೆ ಕಾಲಿನ ಅಡಿಭಾಗದ ದಪ್ಪ ಚರ್ಮ ಕಡಿಮೆಯಾಗುವುದರಿಂದ ನಡೆದಾಟ ಕಷ್ಟವಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.* ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದ ಕಾರಣ, ಗಗನಯಾತ್ರಿಗಳ ದೇಹದ ಮೇಲ್ಭಾಗಗಳಲ್ಲಿ ದ್ರವ ಸಂಗ್ರಹವಾಗುತ್ತದೆ, ಇದರಿಂದ ಕೆಲವು ಭಾಗಗಳು ಉಬ್ಬಿದಂತೆ ಕಾಣುತ್ತವೆ. ಭೂಮಿಗೆ ಮರಳಿದ ಬಳಿಕ, ಸಹಜ ಸ್ಥಿತಿಗೆ ಹಿಂತಿರುಗಲು ಅವರಿಗೆ ಹಲವಾರು ವಾರಗಳೇ ಅಗತ್ಯವಿರುತ್ತದೆ. ಸುನೀತಾ ವಿಲಿಯಮ್ಸ್: 608 ದಿನಗಳ ಬಾಹ್ಯಾಕಾಶ ಸಾಧನೆ!* ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಒಟ್ಟು 608 ದಿನಗಳನ್ನು ಕಳೆದಿದ್ದು, ಪೆಗ್ಗಿ ವಿಟ್ಸನ್ (675 ದಿನಗಳು) ನಂತರ ಎರಡನೇ ಸ್ಥಾನದಲ್ಲಿದ್ದಾರೆ * ಅವರು 9 ಬಾಹ್ಯಾಕಾಶ ನಡಿಗೆಗಳಲ್ಲಿ 62 ಗಂಟೆಗಳ ಕಾಲ ಗಗನಯಾತ್ರೆ ನಡೆಸಿದ್ದಾರೆ. ಐಎಸ್ಎಸ್ನಲ್ಲಿ ಮೂರು ತಿಂಗಳು ಸೇವೆ ಸಲ್ಲಿಸಿದ ಬಳಿಕ ನಿಲ್ದಾಣದ ಕಮಾಂಡರ್ ಆಗಿ ನೇಮಿತರಾಗಿದ್ದರು ಮತ್ತು ಈ ತಿಂಗಳ ಆರಂಭದವರೆಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು.