* ಲಾರ್ಡ್ಸ್ ಅಂಗಳದಲ್ಲಿ ದಕ್ಷಿಣ ಆಫ್ರಿಕಾ ತಂಡವು ಐತಿಹಾಸಿಕ ಸಾಧನೆ ಮಾಡಿದ್ದು, 2025ರ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ಗಳಿಂದ ಜಯಭೇರಿ ಬಾರಿಸಿದೆ. ಇದು ದಕ್ಷಿಣ ಆಫ್ರಿಕಾಗೆ 27 ವರ್ಷಗಳ ನಂತರದ ಮೊದಲ ಐಸಿಸಿ ಪ್ರಶಸ್ತಿಯಾಗಿದೆ.* ಫೈನಲ್ ಪಂದ್ಯದಲ್ಲಿ ಎಡನ್ ಮರ್ಕರಂ (136) ಮತ್ತು ನಾಯಕ ತೆಂಬಾ ಬವುಮಾ (66) ಅವರ ಶ್ರೇಷ್ಠ ಆಟದ ಬಲದಿಂದ ಆಸ್ಟ್ರೇಲಿಯಾವನ್ನು 5 ವಿಕೆಟ್ಗಳಿಂದ ಸೋಲಿಸಿದರು.* ಮೂರನೇ ದಿನದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 213/2 ರನ್ ಗಳಿಸಿ ಸುಸ್ಥಿತಿಯಲ್ಲಿ ಇತ್ತು. ನಾಲ್ಕನೇ ದಿನದಂದು ಗೆಲುವಿಗೆ 69 ರನ್ ಅಗತ್ಯವಿದ್ದರೂ ಆಸ್ಟ್ರೇಲಿಯಾ ಬೌಲರ್ಗಳ ತೀವ್ರ ದಾಳಿಯ ನಡುವೆ ಮರ್ಕರಂ ಆಕ್ರಮಣಕಾರಿ ನಿಲುವನ್ನು ಹಿಡಿದಿದ್ದರು.* ಗೆಲುವಿಗೆ ಕೇವಲ 6 ರನ್ ಬಾಕಿಯಿರುವಾಗ ಅವರು ಔಟಾದರೂ ಬೆಡಿಂಗ್ಹ್ಯಾಮ್ ಮತ್ತು ಕೈಲ್ ವೆರೆಯೇನ್ ತಂಡವನ್ನು ಗೆಲುವಿನ ದಡ ಸೇರಿಸಿದರು.* ಲಾರ್ಡ್ಸ್ನಲ್ಲಿ ಈದು ನಡೆದ ಎರಡನೇ ದೊಡ್ಡ ಚೇಸಿಂಗ್ ಆಗಿದ್ದು, 141 ವರ್ಷಗಳ ಬಳಿಕ ಈ ಸಾಧನೆ ಸಾಧ್ಯವಾಯಿತು. ಇದುವರೆಗಿನ ಮೂರು ಟೆಸ್ಟ್ ಚಾಂಪಿಯನ್ಷಿಪ್ಗಳಲ್ಲಿ ನ್ಯೂಜಿಲೆಂಡ್ (2019), ಆಸ್ಟ್ರೇಲಿಯಾ (2021) ನಂತರ ಈಗ ದಕ್ಷಿಣ ಆಫ್ರಿಕಾ ಮೂರನೇ ಚಾಂಪಿಯನ್ ಆಗಿದೆ.