* ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಸೀಸನ್ಗಾಗಿ ಲಕ್ನೋ ಸೂಪರ್ ಜೈಂಟ್ಸ್ ಅವರನ್ನು 27 ಕೋಟಿ ರೂಪಾಯಿಗಳಿಗೆ ಖರೀದಿಸಿದ ರಿಷಬ್ ಪಂತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನು ಮುರಿದರು. * ಪಂತ್ ಅವರ 27 ಕೋಟಿ ರೂಪಾಯಿಗಳ ಬಿಡ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬಿಡ್ ಆಯಿತು, ಇದು ಶ್ರೇಯಸ್ ಅಯ್ಯರ್ ಅವರ 26.75 ಕೋಟಿ ರೂಪಾಯಿಗಳ ದಾಖಲೆಯನ್ನು ಮೀರಿಸಿದೆ.* ಮೂಲ ಬೆಲೆ 2 ಕೋಟಿ ರೂಪಾಯಿಗೆ ರಿಷಬ್ ಪಂತ್ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪೈಪೋಟಿಗಿಳಿದವು. ಕ್ಷಣ ಮಾತ್ರದಲ್ಲೇ ಬಿಡ್ 10 ಕೋಟಿಗೇರಿತು. ಮಾಲಕಿ ಕಾವ್ಯಾ ಮಾರನ್ ತಾನು ಪಂತ್ ಬಿಟ್ಟುಕೊಡಲ್ಲ ಎಂಬಂತೆ ಬಿಡ್ಡಿಂಗ್ ವಾರ್ಗೆ ಧುಮುಕಿದರು. ಬರೋಬ್ಬರಿ 20 ಕೋಟಿ ಬಿಡ್ ಮಾಡಿದರು.* ಲಕ್ನೋ ತಂಡ 27 ಕೋಟಿ ರೂ ಬಿಡ್ ಕರೆದು ಪಂತ್ ತಮಗೆ ಬೇಕೆಂದಿತು. ಅಷ್ಟರಲ್ಲಿ ಡೆಲ್ಲಿ ಬಿಡ್ನಿಂದ ಹಿಂದೆ ಸರಿಯಿತು.* ಇದಕ್ಕೂ ಮುನ್ನ 2 ಕೋಟಿ ಮೂಲ ಬೆಲೆಯ ಶ್ರೇಯಸ್ ಅಯ್ಯರ್ 26.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ಗೆ ಬಿಕರಿಯಾದರು. ಜೋಸ್ ಬಟ್ಲರ್ ಖರೀದಿಗೆ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಬಿಡ್ ಪೈಪೋಟಿಗೆ ಇಳಿದವು.