* ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರನ್ನು 23ನೇ ಕಾನೂನು ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಅವರು ಏಪ್ರಿಲ್ 15ರಂದು ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಕಾನೂನು ಸಚಿವಾಲಯ ತನ್ನ 'ಎಕ್ಸ್' ಖಾತೆಯಲ್ಲಿ ತಿಳಿಸಿದೆ.* ಕಳೆದ ವರ್ಷ ಸೆಪ್ಟೆಂಬರ್ 3ರಂದು ಮೂರು ವರ್ಷದ ಅವಧಿಗೆ ರಚಿಸಲಾದ 23ನೇ ಕಾನೂನು ಆಯೋಗಕ್ಕೆ ವಕೀಲ ಹಿತೇಶ್ ಜೈನ್ ಹಾಗೂ ಪ್ರೊ. ಡಿ.ಪಿ. ವರ್ಮಾ ಪೂರ್ಣಾವಧಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.* ಪ್ರೊ. ವರ್ಮಾ ಮುಂಚಿನ ಕಾನೂನು ಆಯೋಗದ ಸದಸ್ಯರಾಗಿದ್ದರು. ಏಕರೂಪ ನಾಗರಿಕ ಸಂಹಿತೆ ಸಾಧ್ಯವಿದೆಯೇ ಎಂಬುದರ ಕುರಿತ ಅಧ್ಯಯನ ಕಾರ್ಯವನ್ನು ಈ ಆಯೋಗಕ್ಕೆ ನೀಡಲಾಗಿದೆ.* ನ್ಯಾ. ಮಾಹೇಶ್ವರಿ ಅವರು ಮೇ 2023ರಲ್ಲಿ ಸುಪ್ರೀಂ ಕೋರ್ಟ್ನಿಂದ ನಿವೃತ್ತರಾಗಿದ್ದರು. ಸುಪ್ರೀಂ ಕೋರ್ಟ್ಗೆ ಬರಲಿರುವ ಮೊದಲು ಅವರು ಕರ್ನಾಟಕ ಹಾಗೂ ಮೇಘಾಲಯ ಹೈಕೋರ್ಟ್ಗಳಲ್ಲಿ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.