Job Description: * ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದಿಂದ ಹಮ್ಮಿಕೊಂಡಿರುವ 21ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯಕ್ಕೆ ಅಕ್ಟೋಬರ್ 25 ರಂದು (ಶುಕ್ರವಾರ) ಚಾಲನೆ ನೀಡಲಾಯಿತು.* ಗಣತಿಗೆ 200 ಕೋಟಿ ರೂ.ವೆಚ್ಚದಲ್ಲಿ ಮುಂದಿನ ವರ್ಷದ ಫೆಬ್ರವರಿಯವರೆಗೆ ನಡೆಯಲಿರುವ 21ನೇ ಜಾನುವಾರು ಗಣತಿಗೆ ಚಾಲನೆ ನೀಡಿದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಮತ್ತು ಹೈನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಅವರು ನಿಖರ ದತ್ತಾಂಶಗಳ ಲಭ್ಯತೆಯು ಜಾನುವಾರ ಆರೋಗ್ಯ ಸುರಕ್ಷತೆಯನ್ನು ಖಚಿತಪಡಿಸಲು ಮತ್ತು ಈ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಲು ನೆರವಾಗಲಿದೆ ಎಂದು ತಿಳಿಸಿದರು.* ಪ್ರಾಣಿಗಳಿಗೆ ಆರೋಗ್ಯ ರಕ್ಷಣಾ ಸೌಲಭ್ಯ ಕಲ್ಪಿಸಲು 'ಸಾಂಕ್ರಾಮಿಕ ನಿಧಿ ಯೋಜನೆ'ಗೂ ಇದೇ ವೇಳೆ ಚಾಲನೆ ನೀಡಿದ ಸಚಿವರು ಇದಕ್ಕಾಗಿ ₹210 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.* ಜಾನುವಾರು ಗಣತಿಯು ಮುಂದಿನ ವರ್ಷದ ಫೆಬ್ರುವರಿ ವರೆಗೆ ನಡೆಯಲಿದೆ. 2026ಕ್ಕೆ ವರದಿ ಬಿಡುಗಡೆಯಾಗಲಿದೆ ಎಂದರು.