* 2050ರ ವೇಳೆಗೆ ಜಾಗತಿಕ ಜನಸಂಖ್ಯೆಯ ಶೇ.75ರಷ್ಟು ಮಂದಿ ತೀವ್ರ ಬರಗಾಲವನ್ನು ಅನುಭವಿಸಲಿದ್ದಾರೆ.* ಈ ವರದಿಯನ್ನು ವಿಶ್ವಸಂಸ್ಥೆಯ ಕನ್ವೆನ್ಶನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಶನ್ (ಯುಎನ್ಸಿಸಿಡಿ) ಬಿಡುಗಡೆ ಮಾಡಿರುವ ದಿ ವರ್ಲ್ಡ್ ಡೈ ಅಟ್ಲಾಸ್ ಎಂಬ ವರದಿ ತಿಳಿಸಿದೆ.* ಬರಗಾಲವು ವ್ಯಾಪಾರ, ಕೃಷಿ, ಉತ್ಪಾದನೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.* ಭಾರತದ ಸುಮಾರು 25 ಮಿಲಿಯನ್ ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ದೇಶದಲ್ಲಿ ಉಂಟಾಗುವ ಬರಗಾಲ ಕೃಷಿ ಮೇಲೆ ಅದರಲ್ಲಿಯೂ ವಿಶೇಷವಾಗಿ ಸೊಯಾಬೀನ್ ಬೆಳೆಗಳ ಮೇಲೆ ಪರಿಣಾಮ ಬೀರಲಿದೆ.* ಕುಡಿಯುವ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ. ಬರಗಳು ಕೇವಲ ನೈಸರ್ಗಿಕ ವಿದ್ಯಮಾನಗಳಲ್ಲ. ಬದಲಿಗೆ ಸಂಪನ್ಮೂಲ ನಿರ್ವಹಣೆಯಲ್ಲಿ ಮಾನವ ಮಾಡುವ ಕೆಲ ಕೃತ್ಯಗಳಿಂದಲೂ ಬರಗಾಲ ಉಂಟಾಗುತ್ತದೆ.* 2020ರಿಂದ 2023ರ ಅವಧಿಯಲ್ಲಿ ನೀರಿಗೆ ಸಂಬಂಧಿಸಿದಂತೆ ಭಾರತದಲ್ಲಿ ಅತಿ ಹೆಚ್ಚು ಗಲಭೆಗಳು ಸಂಭವಿಸಿವೆ. ತತ್ಕ್ಷಣದ ಕ್ರಮಗಳನ್ನು ಕೈಗೊಳ್ಳದಿದ್ದರೆ ಈ ಗಲಭೆಗಳು ಮತ್ತಷ್ಟು ಉಲ್ಬಣಗೊಳ್ಳಲಿವೆ. ಇದಕ್ಕೆ ಅಂತಾರಾಷ್ಟ್ರೀಯ ಸಹಯೋಗ ತುಂಬಾ ಮುಖ್ಯ.* ಬರಗಾಲ ತಡೆಗಟ್ಟಲು ಉತ್ತಮ ಕೃಷಿ ಪದ್ಧತಿ ಅಳವಡಿಕೆ ಬಹಳ ಮುಖ್ಯ ಎಂದು ವರದಿಯಲ್ಲಿ ವಿವರಿಸಲಾಗಿದೆ. ಹವಾಮಾನ ಬದಲಾವಣೆ ತಡೆಗಟ್ಟದಿದ್ದರೆ ಭವಿಷ್ಯದಲ್ಲಿ ಆಪತ್ತು ಕಟ್ಟಿಟ್ಟಬುತ್ತಿ.