* 2025-26ರ ಬಜೆಟ್ ಅವಧಿಯಲ್ಲಿ ಭಾರತದ ರಕ್ಷಣಾ ವೆಚ್ಚವು 6.81 ಟ್ರಿಲಿಯನ್ ರೂ.ಗಳಿದ್ದು, 2047ರ ವೇಳೆಗೆ ಈ ಮೊತ್ತವು 31.7 ಟ್ರಿಲಿಯನ್ ರೂ.ಗಳಿಗೆ ತಲುಪಲಿದೆ ಎಂಬ ನಿರೀಕ್ಷೆಯಿದೆ.* ಈ ಅವಧಿಯಲ್ಲಿ ರಕ್ಷಣಾ ಉತ್ಪಾದನೆ 1.46 ಟ್ರಿಲಿಯನ್ ರೂ.ಗಳಿಂದ 8.8 ಟ್ರಿಲಿಯನ್ ರೂ.ಗಳವರೆಗೆ, ಅಂದರೆ ಆರು ಪಟ್ಟು ಏರಿಕೆಯಾಗಬಹುದು ಎಂದು ಸಿಐಐ ಮತ್ತು ಕೆಪಿಎಂಜಿ ಇಂಡಿಯಾ ಬಿಡುಗಡೆ ಮಾಡಿರುವ ‘ರಕ್ಷಣಾ ಕೈಗಾರಿಕಾ ವಲಯ ದೃಷ್ಠಿಕೋನ 2047’ ವರದಿ ಹೇಳುತ್ತದೆ.* ‘ಆತ್ಮನಿರ್ಭರ, ಅಗ್ರಣಿ ಮತ್ತು ಅತುಲ್ಯ ಭಾರತ-2047’ ಎಂಬ ಶೀರ್ಷಿಕೆಯಡಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ.* 2047ರ ವೇಳೆಗೆ ಭಾರತದಿಂದ ರಕ್ಷಣಾ ಉತ್ಪನ್ನಗಳ ರಫ್ತು 2.8 ಟ್ರಿಲಿಯನ್ ರೂ.ಗಳಿಗೆ ಹೆಚ್ಚಾಗಬಹುದು ಎಂದು ವರದಿಯಲ್ಲಿ ಅಂದಾಜಿಸಲಾಗಿದೆ ಇದು ಪ್ರಸ್ತುತ 24,000 ಕೋಟಿ ರೂ.ಗಳಿಗಿಂತ 12 ಪಟ್ಟು ಹೆಚ್ಚಾಗಿರುವುದು.* ಪ್ರಸ್ತುತ ರಕ್ಷಣಾ ಬಜೆಟ್ನ ಶೇಕಡಾ 4ರಷ್ಟು ಇರುವ ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚವು ಶೇಕಡಾ 8 ರಿಂದ 10ರ ಮಟ್ಟಿಗೆ ಏರಿಕೆಯಾಗುವ ಸಾಧ್ಯತೆಯಿದೆ.* 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿಶೀಲದಿಂದ ಅಭಿವೃದ್ಧಿಹೊಂದಿದ ರಾಷ್ಟ್ರವನ್ನಾಗಿ ರೂಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ದೃಷ್ಟಿಕೋನದಲ್ಲಿ ಸಶಸ್ತ್ರ ಪಡೆಗಳ ಆಧುನೀಕರಣ ಹಾಗೂ ಸ್ಥಳೀಯ ಮಿಲಿಟರಿ ತಂತ್ರಜ್ಞಾನದ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಅಗತ್ಯವಿದೆ ಎಂದು ವರದಿ ಸೂಚಿಸುತ್ತದೆ.