* ಅರ್ನಸ್ಟ್ & ಯಂಗ್ ಎಕಾನಮಿ ವಾಚ್ ಇತ್ತೀಚಿನ ವರದಿಯ ಪ್ರಕಾರ, 2038ರ ವೇಳೆಗೆ ಭಾರತ ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ.* 2030ಕ್ಕೆ ಭಾರತದ ಜಿಡಿಪಿ (PPP ಆಧಾರದಲ್ಲಿ) 20.7 ಟ್ರಿಲಿಯನ್ ಡಾಲರ್ ತಲುಪಲಿದ್ದು, 2038ಕ್ಕೆ ಅದು 34.2 ಟ್ರಿಲಿಯನ್ ಡಾಲರ್ ಏರಲಿದೆ ಎಂದು ಅಂದಾಜಿಸಲಾಗಿದೆ.* ಸದ್ಯ ಭಾರತವು 14.2 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಚೀನಾ ಮತ್ತು ಅಮೆರಿಕದ ನಂತರ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮಾರುಕಟ್ಟೆ ವಿನಿಮಯ ದರ ಆಧಾರದಲ್ಲಿ 2028ರೊಳಗೆ ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಲಿದೆ.* ಹೆಚ್ಚಿನ ಉಳಿತಾಯ ಮತ್ತು ಹೂಡಿಕೆ ದರ, ಯುವ ಮತ್ತು ಕೌಶಲ್ಯಯುತ ಕಾರ್ಮಿಕ ಶಕ್ತಿ, ಸುಸ್ಥಿರ ಹಣಕಾಸು ನೀತಿ ಹಾಗೂ ಬಲವಾದ ದೇಶೀಯ ಬೇಡಿಕೆ ಭಾರತವನ್ನು ಮುಂದಾಳುತ್ವಕ್ಕೆ ತರುತ್ತಿವೆ.* ಅಮೆರಿಕವು ಭಾರತೀಯ ರಫ್ತುಗಳ ಮೇಲೆ ವಿಧಿಸಿರುವ 50% ಸುಂಕವು (ಜವಳಿ, ರತ್ನಾಭರಣ, ಸೀಗಡಿ, ಚರ್ಮ ವಸ್ತುಗಳು) 48 ಬಿಲಿಯನ್ ಡಾಲರ್ ಮೌಲ್ಯದ ರಫ್ತಿಗೆ ಹೊಡೆತ ನೀಡಲಿದೆ. * ಆದರೆ ಸೂಕ್ತ ಪ್ರತಿತಂತ್ರಗಳಿಂದ ಇದರ ಜಿಡಿಪಿ ಮೇಲೆ ಪರಿಣಾಮ ಕೇವಲ 0.1% ಆಗಿರಲಿದೆ. ಬೆಳವಣಿಗೆ ದರವು 6.5% ರಿಂದ 6.4%ಕ್ಕೆ ಇಳಿಯುವ ಸಾಧ್ಯತೆ ಇದೆ.