* 2034ರ ಪುರುಷರ ಫುಟ್ಬಾಲ್ ವಿಶ್ವಕಪ್ನ ಆತಿಥ್ಯವನ್ನು ಸೌದಿ ಅರೇಬಿಯಾ ವಹಿಸಿಕೊಳ್ಳಲಿದೆ ಎಂದು ಫಿಫಾ ಇಂದು ಅಧಿಕೃತವಾಗಿ ಘೋಷಿಸಿದೆ.* ನೆರೆ ರಾಷ್ಟ್ರ ಕತಾರ್ 2022ರ ಪುರುಷರ ಫುಟ್ಬಾಲ್ ವಿಶ್ವಕಪ್ನ ಆತಿಥ್ಯವನ್ನು ವಹಿಸಿಕೊಂಡಿತ್ತು. ಅದಾಗಿ 12 ವರ್ಷಗಳ ನಂತರ ಮತ್ತೆ ಸೌದಿ ಅರೇಬಿಯಾಕ್ಕೆ ಆತಿಥೇಯ ರಾಷ್ಟ್ರವಾಗುವ ಅವಕಾಶ ಸಿಕ್ಕಿದೆ.* ಫುಟ್ಬಾಲ್ನ ಅತಿದೊಡ್ಡ ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶ ಪಡೆದ ಮಧ್ಯಪ್ರಾಚ್ಯದ ಎರಡೇ ರಾಷ್ಟ್ರ ಎಂಬ ಕೀರ್ತಿಗೆ ಸೌದಿ ಅರೇಬಿಯಾ ಭಾಜನವಾಗಲಿದೆ.* ದಕ್ಷಿಣ ಅಮೆರಿಕದ ರಾಷ್ಟ್ರಗಳಾದ ಸ್ಪೇನ್, ಪೋರ್ಚುಗಲ್ ಮತ್ತು ಮೊರಾಕೊ 2030ರ ಪುರುಷರ ಫುಟ್ಬಾಲ್ ವಿಶ್ವಕಪ್ ಆವೃತ್ತಿಯ ಆತಿಥ್ಯದ ಹೊಣೆಗಾರಿಕೆ ಹೊತ್ತುಕೊಳ್ಳಲಿವೆ ಎಂದು ಫಿಫಾ ಸ್ಪಷ್ಟಪಡಿಸಿತು.* ಸೌದಿಯ 'ರಾಜ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಮಹತ್ವಾಕಾಂಕ್ಷೆಯಿಂದಾಗಿ ಈ ಬಿಡ್ ಲಭಿಸಿದೆ. ಇದರಿಂದಾಗಿ ಶ್ರೀಮಂತ ಸೌದಿ ದೇಶವು ಅಪಾರ ಪ್ರಮಾಣದ ಸಂಪನ್ಮೂಲ ವಿನಿಯೋಗಿಸಿ ವಿಶ್ವಕಪ್ ಟೂರ್ನಿಯನ್ನು ಯಶಸ್ವಿಗೊಳಿಸುವ ನಿರೀಕ್ಷೆ ಹೆಚ್ಚಾಗಿದೆ.* ಸೌದಿಯ ರಾಜಧಾನಿ ರಿಯಾದ್ನಲ್ಲಿ ಟೂರ್ನಿ ನಡೆಯಲಿದೆ. 15 ತಿಂಗಳುಗಳ ಬಿಡ್ ಪ್ರಕ್ರಿ- ಯೆಯಲ್ಲಿ ಸೌದಿ ಅವಿರೋಧವಾಗಿ ಆಯ್ಕೆಯಾಯಿತು.* ಟೂರ್ನಿಗಾಗಿ ಆದರೆ ಮೂಲಸೌಲಭ್ಯಗಳ ನಿರ್ಮಾಣ ಮತ್ತು ಸಿದ್ಧತೆಗಾಗಿ ವಲಸೆ ಕಾರ್ಮಿಕರು ಬಲಿಯಾಗುತ್ತಾರೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಸೌದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ.* ಇದೇ ಮೊದಲ ಬಾರಿಗೆ ಪೋರ್ಚುಗಲ್, ಪರಾಗ್ವೆ ಮತ್ತು ಮೊರಾಕೊ ಮೂರೂ ಸೇರಿ 2030 ರ ಫಿಫಾ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುತ್ತಿದ್ದು, ಉರುಗ್ವೆ ಈಗಾಗಲೇ 1930 ರಲ್ಲಿ ಉದ್ಘಾಟನಾ ಆವೃತ್ತಿಯನ್ನು ಆಯೋಜಿಸಿದೆ. ಏತನ್ಮಧ್ಯೆ, ಅರ್ಜೆಂಟೀನಾ ಮತ್ತು ಸ್ಪೇನ್ ಕೂಡ ಈ ಹಿಂದೆ ಪಂದ್ಯಾವಳಿಯನ್ನು ಆಯೋಜಿಸಿವೆ ಎಂದು ಗಿಯಾನಿ ವಿವರಿಸಿದರು.