* ಭಾರತ ಅಥ್ಲೆಟಿಕ್ಸ್ ಫೆಡರೇಶನ್(AFI) 2029 ಮತ್ತು 2031ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗಳ ಆತಿಥ್ಯಕ್ಕಾಗಿ ಬಿಡ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ ಎಂದು ಅಧ್ಯಕ್ಷ ಅದಿಲ್ ಸುಮರಿವಾಲಾ ತಿಳಿಸಿದ್ದಾರೆ.* ಬಿಡ್ ಸಲ್ಲಿಕೆ ಪ್ರಕ್ರಿಯೆ ಈ ವರ್ಷ ಆರಂಭವಾಗಲಿದೆ ಮತ್ತು ಅಕ್ಟೋಬರ್ 1 ಕೊನೆಯ ದಿನವಾಗಿದೆ. ಆಯೋಜನೆ ಹಕ್ಕು ಪಡೆದ ದೇಶಗಳ ಘೋಷಣೆ 2025ರ ಸೆಪ್ಟೆಂಬರ್ನಲ್ಲಿ ವಿಶ್ವ ಅಥ್ಲೆಟಿಕ್ಸ್ (WA) ಪ್ರಕಟಿಸಲಿರುವುದು.* ಭಾರತವು ಎರಡೂ ವರ್ಷಗಳಿಗೂ ಬಿಡ್ ಸಲ್ಲಿಸಲು ಉತ್ಸುಕವಾಗಿದೆ. ಕನಿಷ್ಠ ಒಂದರ ಆತಿಥ್ಯ ದೊರೆತರೂ ಸಾಕು ಎಂದು ಎಎಫ್ಐ ಉಪಾಧ್ಯಕ್ಷರೂ ಆಗಿರುವ ಸುಮರಿವಾಲಾ ತಿಳಿಸಿದರು.* ಭಾರತವು 2028ರ ಜೂನಿಯರ್ ವಿಶ್ವ ಚಾಂಪಿಯನ್ಷಿಪ್ ಹಾಗೂ ವಿಶ್ವ ಅಥ್ಲೆಟಿಕ್ಸ್ ರಿಲೆ ಕೂಟಗಳ ಆತಿಥ್ಯಕ್ಕೂ ಈಗಾಗಲೇ ಬಿಡ್ ಸಲ್ಲಿಸಿದೆ.* 2026ರ ರಿಲೆ ಕೂಟ ಬೋತ್ಸ್ವಾನಾ ಮತ್ತು 2028ರ ರಿಲೆ ಕೂಟ ಬಹಮಾಸ್ನಲ್ಲಿ ನಡೆಯಲಿದೆ. ಈ ನಂತರದ ಕೂಟಗಳನ್ನು ಆಯೋಜಿಸಲು ಭಾರತ ಉತ್ಸುಕರಾಗಿದೆ.