* 2028ರ ವೇಳೆಗೆ ರಾಜ್ಯ ಸರ್ಕಾರದ ಒಟ್ಟು ಸಾಲ ₹9.25 ಲಕ್ಷ ಕೋಟಿಗೆ ಏರಲಿದೆ ಎಂದು ಆರ್ಥಿಕ ಇಲಾಖೆ ಅಂದಾಜಿಸಿದೆ. ಹಾಗೆಯೇ ವಾರ್ಷಿಕ ಬಡ್ಡಿ ಪಾವತಿ ₹60,306 ಕೋಟಿ ದಾಟಲಿದೆ.* 2025–26 ಆರ್ಥಿಕ ವರ್ಷದ ಅಂತ್ಯದ ವೇಳೆಗೆ ವಿತ್ತೀಯ ಕೊರತೆ ₹90,428 ಕೋಟಿ ಆಗಲಿದೆ ಎಂದು ಸಿದ್ದರಾಮಯ್ಯ ಬಜೆಟ್ನಲ್ಲಿ ತಿಳಿಸಿದ್ದಾರೆ. ಈ ವರ್ಷ ಗರಿಷ್ಠ ₹1.16 ಲಕ್ಷ ಕೋಟಿ ಸಾಲ ಎತ್ತಲು ಅವಕಾಶವಿದೆ.* ಮುಂಬರುವ ಆರ್ಥಿಕ ವರ್ಷಗಳಲ್ಲಿ ವೇತನ, ಪಿಂಚಣಿ ಮತ್ತು ಬದ್ಧ ವೆಚ್ಚಗಳ ಏರಿಕೆಯಿಂದ ರಾಜ್ಯದ ಹಣಕಾಸು ಹೊರೆಯೂ ಹೆಚ್ಚಾಗಲಿದೆ.* ಆರ್ಥಿಕ ಇಲಾಖೆ ಮಂಡಿಸಿದ ‘ಮಧ್ಯಮಾವಧಿ ವಿತ್ತೀಯ ಯೋಜನೆ 2025–29’ನ ಮುನ್ನಂದಾಜಿನಲ್ಲಿ ಹೊರೆಗಳ ನಿರ್ವಹಣೆಗೆ ಸಾಲದ ಅವಲಂಬನೆ ಅನಿವಾರ್ಯ ಎಂದು ಉಲ್ಲೇಖಿಸಲಾಗಿದೆ.* 2027–28ರ ಮಾರ್ಚ್ ಅಂತ್ಯಕ್ಕೆ ಒಟ್ಟು ಸಾಲ ₹9.25 ಲಕ್ಷ ಕೋಟಿ, 2028–29ರ ಮಾರ್ಚ್ ಅಂತ್ಯಕ್ಕೆ ₹10.17 ಲಕ್ಷ ಕೋಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.* ಸರ್ಕಾರ ಜಿಎಸ್ಡಿಪಿ ಹೋಲಿಕೆಯಲ್ಲಿ ಸಾಲದ ಪ್ರಮಾಣ ಕಡಿತಕ್ಕೆ ಗಮನಹರಿಸಿದೆ. ಕೇಂದ್ರ ತೆರಿಗೆ ಪಾಲು ಹೆಚ್ಚಳ ಮತ್ತು ಜಿಎಸ್ಟಿ ಪರಿಹಾರ ಸೆಸ್ ರದ್ದತಿಯಿಂದ ಹೆಚ್ಚುವರಿ ಆದಾಯ ನಿರೀಕ್ಷಿಸಿದೆ.* ಆರ್ಥಿಕ ಇಲಾಖೆ ಮುನ್ನಂದಾಜಿನಲ್ಲಿ ಹೇಳಿರುವುದಾದರೆ, 16ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು ನೀಡುವ ನಿರೀಕ್ಷೆ ಇದ್ದು, ಆ ಮೂಲಕ ಕೇಂದ್ರದಿಂದ ಸ್ವೀಕೃತವಾಗುವ ರಾಜಸ್ವವು ಹೆಚ್ಚಳವಾಗುವ ಸಾಧ್ಯತೆ ಇದೆ.* ಕೇಂದ್ರ ಸರ್ಕಾರವು 16ನೇ ಹಣಕಾಸು ಆಯೋಗಕ್ಕೆ ರಾಜ್ಯಗಳ ಪಾಲಿನ ತೆರಿಗೆ ಹಂಚಿಕೆಯನ್ನು ಶೇ 41ರಿಂದ 40ಕ್ಕೆ ಇಳಿಸಲು ಶಿಫಾರಸು ಮಾಡಲು ಸೂಚಿಸಿದೆ. ಇದರಿಂದ ರಾಜ್ಯಗಳ ಪಾಲು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.* ಕೇಂದ್ರದಿಂದ ಪಾಲು ಕಡಿಮೆಯಾದರೆ ವಿತ್ತೀಯ ಕೊರತೆ ಹೆಚ್ಚಾಗಿ ಸಾಲದ ಅವಲಂಬನೆ ಹೆಚ್ಚಗಬಹುದು. ಇದನ್ನು ನಿಯಂತ್ರಿಸಲು ಅನಗತ್ಯ ವೆಚ್ಚ ಕಡಿತ ಅಗತ್ಯ, ಆದರೆ ಅದು ಅಸಾಧ್ಯ ಎಂಬುದು ಅಧಿಕಾರಿಗಳ ಅಂದಾಜಿಸಲಾಗಿದೆ.