* 128 ವರ್ಷಗಳ ನಂತರ ಕ್ರಿಕೆಟ್ ಕ್ರೀಡೆ 2028ರ ಒಲಿಂಪಿಕ್ಸ್ನಲ್ಲಿ ಮತ್ತೆ ಸೇರ್ಪಡೆಯಾಗುತ್ತಿದೆ. ಜುಲೈ 12ರಿಂದ 29ರ ತನಕ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ.* ಪಂದ್ಯಗಳು ಲಾಸ್ ಏಂಜಲೀಸ್ನಿಂದ 50 ಕಿಮೀ ದೂರದಲ್ಲಿರುವ ಪೊಮೆನಾ ಫೇರ್ಗ್ರೌಂಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮಹಿಳೆಯರ ಫೈನಲ್ ಜುಲೈ 20ರಂದು ಮತ್ತು ಪುರುಷರ ಫೈನಲ್ ಜುಲೈ 29ರಂದು ನಡೆಯಲಿದೆ.* ಪ್ರತಿ ವಿಭಾಗದಲ್ಲಿ ಆರು ತಂಡಗಳು ಭಾಗವಹಿಸಲಿದ್ದು, ಪ್ರತೀ ತಂಡದಲ್ಲಿ 15 ಆಟಗಾರರಿರುತ್ತಾರೆ. ಪಂದ್ಯಗಳು ಟಿ20 ಮಾದರಿಯಲ್ಲಿದ್ದು, ಹೊಸ ಪ್ರೇಕ್ಷಕರನ್ನು ಸೆಳೆಯುವುದು ಉದ್ದೇಶವಾಗಿದೆ. ಜುಲೈ 14 ಮತ್ತು 21ರಂದು ಮಾತ್ರ ಪಂದ್ಯಗಳಿಲ್ಲ.*1900ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವೆ ನಡೆದ ಕ್ರಿಕೆಟ್ ಪಂದ್ಯವೇ ಇದುವರೆಗೆ ನಡೆದ ಏಕೈಕ ಪಂದ್ಯವಾಗಿತ್ತು.* ಅಮೆರಿಕದಲ್ಲಿ ಕ್ರಿಕೆಟ್ ನಿಧಾನವಾಗಿ ಜನಪ್ರಿಯವಾಗುತ್ತಿದೆ. ಕಳೆದ ಟಿ20 ವಿಶ್ವಕಪ್ನಲ್ಲಿ ಅಮೆರಿಕದ ಟೆಕ್ಸಾಸ್, ನ್ಯೂಯಾರ್ಕ್, ಫ್ಲೋರಿಡಾದಲ್ಲಿ ಪಂದ್ಯಗಳು ನಡೆದಿದ್ದವು.* ಕ್ರಿಕೆಟ್ ಜೊತೆಗೆ ಬೇಸ್ಬಾಲ್/ಸಾಫ್ಟ್ಬಾಲ್, ಫ್ಲ್ಯಾಗ್ ಫುಟ್ಬಾಲ್, ಲ್ಯಾಕ್ರೋಸ್ (ಸಿಕ್ಸ್), ಸ್ಕ್ವ್ಯಾಶ್ ಈ ಬಾರಿ ಒಲಿಂಪಿಕ್ಸ್ಗೆ ಹೊಸದಾಗಿ ಸೇರಿಸಲಾದ ಕ್ರೀಡೆಗಳಾಗಿವೆ.