* ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಮೊದಲ ಮಿಷನ್ ಶುಕ್ರಯಾನ್-1 ಅನ್ನು 2028 ರಲ್ಲಿ ಪ್ರಾರಂಭಿಸಲು ಸರ್ಕಾರದಿಂದ ಅನುಮೋದನೆಯನ್ನು ಪಡೆದುಕೊಂಡಿದೆ, * ಶುಕ್ರನ ಸುತ್ತಲೂ ತಿರುಗುವ ಉಪಗ್ರಹದ ಉಡಾವಣೆಗೆ ಕೇಂದ್ರ ಸರಕಾರದಿಂದ ಅನುಮತಿ ಸಿಕ್ಕಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಪೇಸ್ ಅಪ್ಲಿಕೇಶನ್ಸ್ ಸೆಂಟರ್ ನಿರ್ದೇಶಕ ನಿಲೇಶ್ ದೇಸಾಯಿ ಅವರು ತಿಳಿಸಿದ್ದಾರೆ.* ಚಂದ್ರನಿಂದ ಮಣ್ಣು ಹಾಗೂ ಕಲ್ಲುಗಳ ಮಾದರಿಯನ್ನು ಹೊತ್ತು ಭೂಮಿಗೆ ಹಿಂದಿರುಗುವ 'ಚಂದ್ರಯಾನ-4' ಯೋಜನೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. * ಈ ಬಾರಿಯ ಹೊಸ ರೋವರ್ ಚಂದ್ರಯಾನ-3ರ ರೋವರ್ ಗಿಂತ 12 ಪಟ್ಟು ಹೆಚ್ಚು ಭಾರವಾಗಿರಲಿದೆ. ರೋವರ್ ತೂಕವು 350 ಕೆ.ಜಿ ಇರಲಿದೆ. 500 మి. X 500 ವಿಸ್ತೀರ್ಣವನ್ನು ಪ್ರಗ್ಯಾನ್ ರೋವರ್ ಆವರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.* 2030ರ ಒಳಗಾಗಿ ಚಂದ್ರಯಾನ-4 ಯೋಜನೆ ಪೂರ್ಣಗೊಳ್ಳಲಿದೆ. ಇಸ್ರೋದ ವಿಜ್ಞಾನಿಗಳು ಯೋಜನೆಯನ್ನು 2027ರಲ್ಲೇ ಯಶಸ್ವಿಗೊಳಿಸುವ ವಿಶ್ವಾಸವನ್ನು ಹೊಂದಿದ್ದಾರೆ. * 2040ರ ಹೊತ್ತಿಗೆ ಬಾಹ್ಯಾಕಾಶಕ್ಕೆ ಮನುಷ್ಯನನ್ನು ಕಳಿಸುವ ಯೋಜನೆ ಇದ್ದು, 2050ಕ್ಕೆ ಬಾಹ್ಯಾಕಾಶದಲ್ಲಿ ಸ್ವಂತ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಿದ್ದತೆಗಳು ನಡೆದಿವೆ ಎಂದು ದೇಸಾಯಿ ಅವರು ತಿಳಿಸಿದ್ದಾರೆ.