* ಲಾಸ್ ಏಂಜಲಿಸ್ನಲ್ಲಿ ನಿಗದಿಯಾಗಿರುವ 2028ರ ಒಲಿಂಪಿಕ್ಸ್ನಲ್ಲಿ ಬಾಕ್ಸಿಂಗ್ ಸೇರ್ಪಡೆಯಾಗಲಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಅಧ್ಯಕ್ಷ ಥಾಮಸ್ ಬಾಕ್ ಖಚಿತಪಡಿಸಿದ್ದಾರೆ.* ಹೊಸ ಬಾಕ್ಸಿಂಗ್ ಸಂಸ್ಥೆ ವರ್ಲ್ಡ್ ಬಾಕ್ಸಿಂಗ್ಗೆ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮಾನ್ಯತೆ ದೊರೆತಿರುವುದರಿಂದ ಈ ಸಂಬಂಧ ಇದ್ದ ಅಡಚಣೆಗಳು ನಿವಾರಣೆಯಾಗಿ, ಈ ಮಾನ್ಯತೆ ಹಿನ್ನೆಲೆ, ಐಒಸಿ ಕಾರ್ಯಕಾರಿ ಮಂಡಳಿಯು 2028ರ ಒಲಿಂಪಿಕ್ಸ್ನಲ್ಲಿ ಬಾಕ್ಸಿಂಗ್ ಸೇರ್ಪಡೆಗೆ ಅನುಮೋದನೆ ನೀಡಿದೆ. ಇದರಿಂದ ಒಲಿಂಪಿಕ್ಸ್ನಲ್ಲಿ ಬಾಕ್ಸಿಂಗ್ ನಡೆಯುವ ಕುರಿತು ನಡೆದ ಗೊಂದಲಗಳಿಗೆ ಮುಕ್ತಾಯವಾಗಿದೆ.* ಬಾಕ್ಸಿಂಗ್ ಸೇರ್ಪಡೆಗೆ ಐಒಸಿಯ ಪೂರ್ಣ ಅಧಿವೇಶನದ ಅಂತಿಮ ಅಂಕಿತ ಅಗತ್ಯವಿದೆ, ಆದರೆ ಇದು ಕೇವಲ ಔಪಚಾರಿಕ ಪ್ರಕ್ರಿಯೆಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ* ಐಒಸಿಯು, ರಷ್ಯ ಮೂಲದ ಅಂತರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ ಹಣಕಾಸು ನಿರ್ವಹಣೆ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಇಲ್ಲ ಎಂಬ ಕಾರಣದಿಂದ ಅದರ ಮಾನ್ಯತೆ ಹಿಂಪಡೆದಿತ್ತು. 2021ರ ಟೋಕಿಯೊ ಒಲಿಂಪಿಕ್ಸ್ ಮತ್ತು ಕಳೆದ ವರ್ಷದ ಪ್ಯಾರಿಸ್ ಒಲಿಂಪಿಕ್ಸ್ ಸೇರಿದಂತೆ ಅರ್ಹತಾ ಟೂರ್ನಿಗಳನ್ನು ಐಒಸಿಯೇ ನೇರವಾಗಿ ಆಯೋಜಿಸಿತ್ತು.